‘ಯಕ್ಷಿಣಿ ಕನ್ನಡಿ’ ಕವಿ ಜ.ನಾ. ತೇಜಶ್ರೀ ಅವರ ಕವನ ಸಂಕಲನ. ಈ ಕೃತಿಗೆ ಲಲಿತಾ ಸಿದ್ಧಬಸವಯ್ಯ ಹಾಗೂ ಡಾ.ರಾಜೇಂದ್ರ ಚನ್ನಿ ಅವರ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಈ ಸಂಕಲನವು ತೇಜಶ್ರೀಯವರ ಕಾವ್ಯ ಸಾಧನೆಯ ಒಂದು ಮಜಲು ಎನ್ನುತ್ತಾರೆ ರಾಜೇಂದ್ರ ಚನ್ನಿ. ಜೊತೆಗೆ ಅಪೂರ್ವ ಪ್ರತಿಭೆಯ ಅವರು ಪ್ರತಿ ಹಂತದಲ್ಲಿಯೂ ತಮ್ಮನ್ನು ತಾನೇ ಪುನರ್ ಆವಿಷ್ಕಾರ ಮಾಡಿಕೊಳ್ಳುತ್ತಾ ಬರೆಯುತ್ತಾರೆ ಹೀಗಾಗಿ ಬೆಳವಣಿಗೆ ಇತ್ಯಾದಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ ಎನ್ನುತ್ತಾರೆ. ನನ್ನ ಸ್ವಂತದ ಪೂರ್ವಗ್ರಹವು(ಕಾವ್ಯದ ಬಗ್ಗೆ) ಇರುವುದು ತೀವ್ರತೆ, ಟೆನ್ಷನ್, ಭಾಷೆಯೊಂದಿಗೆ ತಿಕ್ಕಾಟ ಇವುಗಳನ್ನು ಹೊಂದಿದ ಕಾವ್ಯದ ಬಗ್ಗೆ. ಅದು ನನ್ನ ವ್ಯಕ್ತಿತ್ವದ ಪ್ರಭಾವದಿಂದಾಗಿ ಬಂದಿರುವಂಥದು. ಅದಕ್ಕಿಂತ ಭಿನ್ನವಾದ ಈ ಸಂಕಲನದ ಪದ್ಯಗಳ ಭಾಷೆ ಹಾಗೂ ಲಯಗಳ ನಿರುಮ್ಮಳ ಖಚಿತತೆ, ಹಿಡಿತ ಮತ್ತು ಕ್ರಿಯಾಶೀಲತೆ ನನ್ನಲ್ಲಿ ಬೆರಗನ್ನೂ, ಅಚ್ಚರಿಯನ್ನೂ ಹಾಗೆಯೇ ಮೆಚ್ಚುಗೆಯನ್ನು ಉಂಟುಮಾಡಿದ್ದಾವೆ ಎಂದು ರಾಜೇಂದ್ರ ಚನ್ನಿ ಮೆಚ್ಚುಗೆ ಸೂಚಿಸಿದ್ದಾರೆ.
ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...
READ MORE