ಲತಾ ಗುತ್ತಿಯವರ ವರ್ತಮಾನ ಕವನಸಂಕಲನದಲ್ಲಿ ಬಂಧನ, ಹೊಲ, ಸಹನೆ, ವೇದನೆ, ಆಶಾಂಕುರ, ಶೂನ್ಯ ಮೊದಲಾದ ಕವನಗಳನ್ನೊಳಗೊಂಡಿದೆ. ಕೊನೆಯ ಒಂದಿಷ್ಟು ಹನಿಗವನಗಳು ಇವರ ಕಾವ್ಯ ಸಿದ್ಧಿಯ ದ್ಯೋತಕವಾಗಿದ್ದು, ಇಂಥ ಗಟ್ಟಿ ಬರವಣಿಗೆಯಲ್ಲಿ ರೂಪಗೊಂಡಿವೆ. ಸಂಶೋಧಕ ಎಂ. ಎಂ. ಕಲಬುರ್ಗಿ ಅವರ ಮುನ್ನುಡಿಯಿದೆ.
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MORE