ಕವಿ ಎಸ್.ವಿ. ಪರಮೇಶ್ವರ ಭಟ್ಟರು ಬರೆದ ಎರಡನೇ ಕವನ ಸಂಕಲನ-ಗಗನ ಚುಕ್ಕಿ. ಒಲವು, ನಾನೂ-ನೀನು, ಪ್ರೇಮದ ಅಂತರ್ದೃಷ್ಟಿ, ಬೇಸಗೆಯಲ್ಲಿ ತುಂಗಾ ದರ್ಶನ, ಅಣ್ಣ-ತಮ್ಮನಿಗೆ ಬರೆದ ಓಲೆ, ಬ್ರಾಹ್ಮಣನಿಗೆ, ಗಗನ ಚುಕ್ಕಿ ಹೀಗೆ ಒಟ್ಟು 44 ಕವನಗಳಿವೆ. ಯಾವ ವಿಷಯದಲ್ಲೇ ಆಗಲಿ, ಉದ್ರೇಕ-ಆಕ್ರೋಶಗಳಿಗೆ ಆಸ್ಪದವಿಲ್ಲ. ಸಮಾಧಾನದ ಬುದ್ಧಿಗೆ ಇಲ್ಲಿಯ ಕವನಗಳು ಸಮೀಪವರ್ತಿಗಳಾಗಿವೆ. ನೋವಾಗಲಿ, ನಲಿವಾಗಲಿ ಪರಮಾತ್ಮನ ಕೃಪೆ ಎಂದು ಕವನಗಳು ದೇವರಿಗೆ ಶರಣಾಗತಿಯನ್ನು ಸೂಚಿಸಿ ಸಂತೃಪ್ತಿ ಹೊಂದುತ್ತವೆ ಎಂದು ಕವಿಗಳು ತಾವು ಬರೆದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು 18-02-1914 ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಸದಾಶಿವರಾಯರು ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಪರಮೇಶ್ವರ ಭಟ್ಟರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಡುತ್ತಿದ್ದರು. ಅವನ ...
READ MORE