ಕತ್ತಲಿಗಂಟಿದ ಬೆಳಕು

Author : ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

Pages 72

₹ 80.00




Year of Publication: 2017
Published by: ಮೌನ ಪ್ರಕಾಶನ
Address: ಗಂಗಾವತಿ, ಕೊಪ್ಪಳ ಜಿಲ್ಲೆ

Synopsys

ಕತ್ತಲೆಗಂಟಿದ ಬೆಳಕು-ಲೇಖಕಿ ಲಕ್ಷ್ಮೀದೇವಿ ಪತ್ತಾರ ಅವರ ಕವಿತೆಗಳ ಸಂಕಲನ. 62 ಕವನಗಳಿವೆ. ವ್ಯಕ್ತಿ ಚಿತ್ರಣ, ಪರಿಸರ ಪ್ರೇಮ, ಸಾಮಾಜಿಕ ವಿದ್ಯಮಾನ ಹೀಗೆ ವಸ್ತು ವೈವಿಧ್ಯತೆಯ ಕವನಗಳಿವೆ. ಸಾಹಿತಿ ಡಾ. ಜಾಜಿ ದೇವೇಂದ್ರಪ್ಪ ಅವರು ಮುನ್ನುಡಿ ಬರೆದು ‘ಸಮಾಜದ ಹಲವು ಜಂಜಡಗಳಿಗೆ, ಕತ್ತಲು ತುಂಬಿದ ಮನಸ್ಸುಗಳಿಗೆ ಆಧುನಿಕತೆಯ ಅದ್ವಾನಗಳಿಗೆ ಇವರ ಕವಿತೆಗಳು ಪರಂಪರೆಯ ಒಳಿತನ್ನು ವರ್ತಮಾನದ  ಒತ್ತಡವನ್ನು ಅವರು ಕಾವ್ಯದಲ್ಲಿ ನಿಭಾಯಿಸುವುದು ಭಾರವಾಗಿ ಕಾಣುತ್ತದೆ. ಏಕೆಂದರೆ, ಅಕ್ಕಮಹಾದೇವಿಯೂ ಕಾಡಿದ್ದಾಳೆ; ಆಧುನಿಕ ಅಮ್ಮನೂ ಕಾಡಿದ್ದಾಳೆ. ಸ್ತ್ರೀತ್ವದ ಚಿಂತನೆಗಳನ್ನು ಹಲವು ಕವನಗಳು ಒಳಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ. ಕೊಪ್ಪಳದ ಶಿ.ಕಾ. ಬಡಿಗೇರ ಅವರು ಬೆನ್ನುಡಿ ಬರೆದು ‘ಕವಿತೆ ಹಿಡಿ ಧಾನ್ಯವಾದರೂ ಅದರ ಕಸುವು ಬಹಳ. ನಿರಂತರ ಅಧ್ಯಯನದ ಫಲವಾಗಿ ಇಲ್ಲಿಯ ಕವಿತೆಗಳು ಕಸುವು ತುಂಬಿಕೊಂಡಿವೆ’ ಎಂದು ಶ್ಲಾಘಿಸಿದ್ದಾರೆ. 

 

About the Author

ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ. ...

READ MORE

Related Books