ನಾಗೊಂಡಹಳ್ಳಿ ಸುನಿಲ್ ಅವರ ಕವನ ಸಂಕಲನ ಕ್ರಷ್ ಕವಿತೆಗಳು. ಕವಿ ಚಾಂದ್ ಪಾಷ ಅವರು ಈ ಕೃತಿಯ ಕುರಿತು ಹೇಳಿರುವಂತೆ, ಕವಿತೆಗಳು ಹಲವು ಕಡೆ ಭಾವದ ತೀವ್ರತೆ ಎಷ್ಟಿದೆ ಎಂದರೆ ಮೇಟಾಫರ್ ಗಳ ಅಗತ್ಯವೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಈ ಪ್ರೇಮ ಕಾವ್ಯದ ನಿಲ್ಲುವ ನಿಲ್ದಾಣ ಸಿಗದಿರಲಿ ಎಂದು ಹಾರೈಸಿದ್ದಾರೆ.
ವಿಮರ್ಶಕ ವಿ.ಚಂದ್ರಶೇಖರ ನಂಗಲಿ ಅವರು ಹೇಳಿರುವಂತೆ, ಕಾವ್ಯದ ಹುಟ್ಟಿಗೆ ಉತ್ಕಟ ಆಭವಾಭಿವ್ಯಕ್ತಿಯೇ ಕಾರಣ. ಈ ಉತ್ಕಟತೆಯು ಏಕಕಾಲಕ್ಕೆ ನಿರ್ದಿಷ್ಟ, ಸಾರ್ವತ್ರಿಕ, ವೈಯಕ್ತಿಕ, ಸಾಮಾಜಿಕ, ಜೀವನಪ್ರೀತಿ ಮಾತ್ರವಲ್ಲದೆ ಜೀವನಪ್ರೀತಿಯ ದ್ವಿದಳ ಧಾನ್ಯವಾಗಿ ಹೊರಹೊಮ್ಮಬೇಕು. ಕ್ರಷ್ ಕವಿತೆಗಳಲ್ಲಿ ನಿರ್ದಿಷ್ಟವಾದ, ವೈಯಕ್ತಿಕವಾದ ಜೀವ ಪ್ರೀತಿಯ ಉತ್ಕಟತೆಯಿದೆ. ಇದು ದ್ವಿದಳಧಾನ್ಯದ ಉತ್ಕಟ ಭಾವಾಭಿವ್ಯಕ್ತಿಯ ಕಾವ್ಯವಾಗಿ ಮೂಡಿಬರಲಿ ಎಂದು ಹಾರೈಸಿದ್ದಾರೆ.
ನಾಗೊಂಡಹಳ್ಳಿ ಸುನಿಲ್ ಅವರು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯ ನಾಗೊಂಡಹಳ್ಳಿ ಗ್ರಾಮದಲ್ಲಿ ಚನ್ನಪ್ಪ ಮತ್ತು ಶಾಂತಮ್ಮ ಅವರ ದಂಪತಿಗಳ ಮಗನಾಗಿ ಕೃಷಿಕ ಕುಟುಂಬದಲ್ಲಿ 30/07/1992 ರಂದು ಜನಿಸಿದರು. ಎಂ.ಎ, ಡಿ.ಪಿಜಿ ಬಿ.ಇಡಿ, ಪದವೀಧರರಾದ ಇವರು ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಡಲೊಳಗಿನ ಕಡಲು, ಕ್ರಷ್ ಕವಿತೆಗಳು ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಲೂರು, ಕೋಲಾರ, ಬಂಗಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ. ಕರ್ನಾಟಕ ಸಾಹಿತ್ಯ ...
READ MORE