ಮುಕ್ತಕ ಸುಮ ಮಾಲೆ

Author : ಸುಮನಾ ಆರ್ ಹೇರ್ಳೆ

Pages 95

₹ 105.00




Year of Publication: 2022
Published by: ಅರ್ಚನಾ ಪ್ರಕಾಶನ
Address: ಮಣೂರು,ಕೋಟ

Synopsys

ಲೇಖಕಿ ಸುಮನಾ ಆರ್ ಹೇರ್ಳೆ ಅವರ ಮುಕ್ತಕಗಳ ಸಂಕಲನ ಮುಕ್ತಕ ಸುಮ ಮಾಲೆ. ನೀಲಾವರ ಸುರೇಂದ್ರ ಅಡಿಗ ಅವರು ಈ ಸಂಕಲನಕ್ಕೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಈ ಸಂಕಲನದಲ್ಲಿನ ಮುಕ್ತಗಳದು ಸುಂದರವಾದ ರಚನೆಗಳು. ಅರ್ಥಪೂರ್ಣವಾದ ಧ್ವನಿಯಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ರಚನೆಗಳು. ಓದಿ ತುಂಬಾ ಖುಷಿಪಟ್ಟಿದ್ದೇನೆ. ಇದೊಂದು ಸಂಗ್ರಹಯೋಗ್ಯ ಕೃತಿಯೆಂದು ನನಗನಿಸಿದೆ. ಮಂಕುತಿಮ್ಮನ ಕಗ್ಗದ ರೀತಿಯ ರಚನೆಗಳು. ನನ್ನ ದೃಷ್ಟಿಯಲ್ಲಿ ಇಲ್ಲಿನ ರಚನೆಗಳೆಲ್ಲಾ ಅರ್ಥಪೂರ್ಣ. ತಾರ್ಕಿಕವಾಗಿ ಯೋಚಿಸುವಂತೆ ಮಾಡುತ್ತವೆ. ಸುಂದರವಾದ ವಚನಗಳು, ಉತ್ತಮವಾದ ಸಂದೇಶ ಇಲ್ಲಿನ ರಚನೆಯಲ್ಲಿದೆ. ನೀತಿಪ್ರಧಾನವಾದ ರಚನೆಗಳನ್ನು ಓದಿ ಖುಷಿಪಟ್ಟೆ. ಬದುಕಿನ ಅನುಭವಗಳಿಗೆ ಮೂರ್ತರೂಪ ಕೊಟ್ಟಿದ್ದಾರೆ. ಅರ್ಥಪೂರ್ಣವಾದ,ಅನುಭವ ಜನ್ಯವಾದ ನುಡಿಗಳಿಂದ ಇಲ್ಲಿನ ರಚನೆಗಳ ಒಳಸಾರ ತಾರ್ಕಿಕವಾಗಿ ಯೋಚಿಸುವಂತೆ ಮಾಡುತ್ತವೆ ಎಂದಿದ್ದಾರೆ.

ಆಶಯ ನುಡಿಗಳಲ್ಲಿ ಕವಿ ಹರಿನರಸಿಂಹ ಉಪಾಧ್ಯಾಯ ಅವರು ಹೇಳುವಂತೆ, ಡಿ. ವಿ. ಜಿ ಯವರು, ಕುಮಾರ ನಿಜಗುಣ ಗುರುಗಳಾದಿಯಾಗಿ ಇಲ್ಲಿವರೆಗೂ ಹಲವಾರು ರಚನಾಕಾರರು ಮುಕ್ತಕಗಳಲ್ಲಿ ಕೃಷಿಯನ್ನು ಯಥೇಚ್ಚವಾಗಿ ಮಾಡಿದ್ದರೂ ಇಂದಿಗೂ ಆದರ ಹೊಳಪು, ವೈಶಿಷ್ಠ್ಯತೆ ಕುಂದಿಲ್ಲ. ಅಂತೆಯೇ ಸೋದರಿ ಶ್ರೀಮತಿ ಸುಮನಾ ಆರ್ ಹೇರ್ಳೆ ಯವರು ಕೂಡಾ ತಮ್ಮ ಬರೆವಣಿಗೆಯ ಒಂದಂಶವಾಗಿ ಮುಕ್ತಕ ಸಾಹಿತ್ಯದಲ್ಲೂ ನಿರಂತರ ಕೃಷಿ ಮಾಡಿ ಇಂದು ಕೃತಿಯೊಂದನ್ನು ಹೊರ ತರುತ್ತಿರುವುದು ಬಹಳ ಸಂತಸದ ವಿಚಾರ. ಇವರು ಸಾಹಿತ್ಯದಲ್ಲೂ ಗಝಲ್, ಕವನ, ಚುಟುಕು, ರುಬಾಯಿ, ಮುಕ್ತಕ ಎಂಬ ವಿವಿಧ ಪ್ರಕಾರಗಳ ರಚನೆಯಲ್ಲಿ ನಿರಂತರ ತೊಡಗಿಸಿಕೊಂಡಿರುವುದರ ಫಲವಾಗಿ ಮುಕ್ತಕಗಳ ಕೃತಿಯು ಮುದ್ರಣ ಹಂತಕ್ಕೆ ಬಂದಿದೆ ಎಂಬುದು ಸರ್ವವಿದಿತ ಎಂಬುದಾಗಿ ಹೇಳಿದ್ದಾರೆ.

About the Author

ಸುಮನಾ ಆರ್ ಹೇರ್ಳೆ
(01 March 1971)

ಕವಯಿತ್ರಿ ಸುಮನಾ ಆರ್ ಹೇರ್ಳೆ  ಕುಂದಾಪುರದ ಕೋಟ ಮೂಲದವರು.ತಂದೆ ವೈದಿಕ ವಿದ್ವಾಂಸರು ಕೆ.ಶಂಕರನಾರಾಯಣ ಸೋಮಯಾಜಿ ಹಾಗೂ ತಾಯಿ ಸಾವಿತ್ರಿ . ಪತಿ ಪಿ ರವೀಂದ್ರ ಹೇರ್ಳೆ.  ಸಾಂಸಾರಿಕ ಜವಾಬ್ದಾರಿಯ ನಡುವೆಯೂ ಬರವಣಿಗೆ, ಯಕ್ಷಗಾನ, ತಾಳಮದ್ದಲೆ, ನಾಟಕ ಇಂಥದ್ದರಲ್ಲೆಲ್ಲ ತೊಡಗಿಸಿಕೊಂಡ ಸಕ್ರಿಯ ಬಹುಮುಖ ಪ್ರತಿಭೆ. ಕೃತಿಗಳು 1) ಬಿಸುಪಿನೆದೆಯ ಕನವರಿಕೆಗಳು ( ಗಝಲ್ ಸಂಕಲನ) 2) ಮುಕ್ತಕ ಸುಮ ಮಾಲೆ ( ಮುಕ್ತಕಗಳ ಸಂಕಲನ) ...

READ MORE

Related Books