ಇಗೋ ಅರಿವೆ

Author : ವಸಂತ ಬನ್ನಾಡಿ

Pages 124

₹ 100.00




Year of Publication: 2011
Published by: ತಿಂಗಳ ಬೆಳಕು ಪ್ರಕಾಶನ
Address: ತುಮಕೂರು

Synopsys

‘ಇಗೋ ಅರಿವೆ’ ಕೃತಿಯು ವಸಂತ ಬನ್ನಾಡಿ ಅವರ ಕವನಸಂಕಲನವಾಗಿದೆ. ಎಡಪಂಥ - ಬಲಪಂಥೀಯರನ್ನು ಇಕ್ಕೆಲಗಳಲ್ಲಿಟ್ಟು ತೂಗಿನೋಡಿ ಸರಿಯಾದ ದಾರಿ ಕ್ರಮಿಸಿ ಎಚ್ಚರವನ್ನು ಕಾಯ್ದುಕೊಂಡವರು ಬನ್ನಾಡಿ. ಪಾಶ್ಚಾತ್ಯ ಕವಿ - ನಾಟಕಕಾರರಾದ ನೆರೂಡ - ಬೆಲ್ಟ್ - ರಿಲೈ - ಕಾಷ್ಟ ಮುಂತಾದವರನ್ನು ನಮ್ಮ ನೆಲದಲ್ಲೂ ಕಾಣಬಹುದೇ ಎಂಬ ಹುಡುಕಾಟ ಇವರದ್ದು. ಇಂಥ ಆರೋಗ್ಯಕರ ನಿಲುವಿನಿಂದ ಸ್ವತಂತ್ರವಾಗಿ ನಿಂತು ದಶದಿಕ್ಕುಗಳಿಗೂ ಕಣ್ಣುಹಾಯಿಸುತ್ತ ತಮ್ಮ ಪದ್ಯಗಳಿಗೆ ಇವರು ವಸ್ತುವನ್ನು ಆಯ್ಕೆಮಾಡುತ್ತಾರೆ. ಇವರ ಕಣ್ಣಳತೆಗೆ, ಅರಿವಿಗೆ ಸಿಕ್ಕುವ ಲೋಕದ ನಾನಾ ಬಗೆಯ ತುಡಿತಗಳು ಇಲ್ಲಿ ಕವನಗಳಾಗಿವೆ. ಇತರರನ್ನು ಮೆಚ್ಚಿಸಬ ಕವಿತೆ ಬರೆಯಬೇಕಾಗಿಲ್ಲ; ಕವಿ ಬರೆದುದನ್ನು ಜನತೆ ಮೆಚ್ಚಿದರೆ ಸಾಕೆಂಬ ಧೋರಣೆ ಇವರದ್ದು. ಇಂತಹ ಧೋರಣೆಯನ್ನು ಅವರ ಈ ಕವನಸಂಕಲನದಲ್ಲಿ ಕಾಣಬಹುದಾಗಿದೆ.

About the Author

ವಸಂತ ಬನ್ನಾಡಿ
(20 September 1955)

ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್‌ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...

READ MORE

Reviews

(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)

ಇವು ವಸಂತ ಬನ್ನಾಡಿ ಬರೆದ ಕವನಗಳು, ಪದ್ಯಗಳು ಪ್ರಾರಂಭವಾಗುವ ಮುನ್ನ ಬರೆದ ಮುನ್ನುಡಿಗೆ ಬದಲಾಗಿ ಎಂಬ ಮುನ್ನರಿವು ನೀಡುವ ಅನಿಸಿಕೆಗಳು ಅತ್ಯಂತ ಸೊಗಸಾಗಿದೆ. ಪದ್ಯಗಳನ್ನು ಅರ್ಥೈಸಲು ಸಹಾಯಕವಾಗಿವೆ. ನಮ್ಮ ಕವಿಗಳು - ಪಾಶ್ಚಾತ್ಯಕವಿಗಳೆಂಬ ಅದ್ಭುತ ತುಲನೆಯೊಂದನ್ನು ಸದಾ ಜಾಗೃತವಾಗಿಟ್ಟುಕೊಂಡು ಇವರು ಕವನಗಳನ್ನು ಬರೆದಿದ್ದಾರೆ. ಎಡದಂಥ - ಬಲಪಂಥೀಯರನ್ನು ಇಕ್ಕೆಲಗಳಲ್ಲಿಟ್ಟು ತೂಗಿನೋಡಿ ಸರಿಯಾದ ದಾರಿ ಕ್ರಮಿಸಿ ಎಚ್ಚರವನ್ನು ಕಾಯ್ದುಕೊಂಡವರು ಬನ್ನಾಡಿ ಪಾಶ್ಚಾತ್ಯ ಕವಿ - ನಾಟಕಕಾರರಾದ ನೆರೂಡ - ಬೆಲ್ಟ್ - ರಿಲೈ - ಕಾಷ್ಟ ಮುಂತಾದವರನ್ನು ನಮ್ಮ ನೆಲದಲ್ಲೂ ಕಾಣಬಹುದೇ ಎಂಬ ಹುಡುಕಾಟ ಇವರದ್ದು ಇಂಥ ಆರೋಗ್ಯಕರ ನಿಲುವಿನಿಂದ ಸ್ವತಂತ್ರವಾಗಿ ನಿಂತು ದಶದಿಕ್ಕುಗಳಿಗೂ ಕಣ್ಣುಹಾಯಿಸುತ್ತ ತಮ್ಮ ಪದ್ಯಗಳಿಗೆ ಇವರು ವಸ್ತುವನ್ನು ಆಯ್ಕೆಮಾಡುತ್ತಾರೆ. ಇವರ ಕಣ್ಣಳತೆಗೆ, ಅರಿವಿಗೆ ಸಿಕ್ಕುವ ಲೋಕದ ನಾನಾ ಬಗೆಯ ತುಡಿತಗಳು ಇಲ್ಲಿ ಕವನಗಳಾಗಿವೆ. ಇತರರನ್ನು ಮೆಚ್ಚಿಸಬ ಕವಿತೆ ಬರೆಯಬೇಕಾಗಿಲ್ಲ; ಕವಿ ಬರೆದುದನ್ನು ಜನತೆ ಮೆಚ್ಚಿದರೆ ಸಾಕೆಂಬ ಧೋರಣೆ ಇವರದ್ದು ೪೦ಕ್ಕೂ ಹೆಚ್ಚು ಕನ್ನಡ ಮತ್ತು ಇತರ ಪಾಶ್ಚಾತ್ಯ ನಾಟಕಗಳನ್ನು ನಿರ್ದೇಶಿಸಿದ ಖ್ಯಾತಿ ಇವರದು. ನಾಟಕ ನಿರ್ದೇಶನಕ್ಕಾಗಿ ಆರು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಸಂಕಲನದ ಶೀರ್ಷಿಕೆ 'ಇಗೋ ಅರಿವೆ' ಬಾರ್ಥ ಗಳನ್ನು ಸುರಿಸುತ್ತದೆ. ಯಾವ ಅರ್ಥವಾದರೂ ಸರಿಯೆ, ಅದರ ಧ್ವನಿ ಹಿತವೇ ಆಗಿದೆ.

Related Books