‘ಕಾವ್ಯ ಕುಸುಮ’ ಎಂಬುದು ಬಿ.ಟಿ. ಮಂಜುನಾಥ ಅವರ ಕವನ ಸಂಕಲನ. ಭಾವನೆಗಳ ಬುತ್ತಿಗೆ ಕವಿತೆಗಳ ಮುತ್ತಿನ ತೋರಣ ಕಟ್ಟಿ ಸಾಹಿತ್ಯ ಕೃಷಿಗೆ ತೊಡಗಿಕೊಂಡು ಬೌದ್ಧಿಕ ಕಸರತ್ತಿನೊಂದಿಗೆ ಭಾವನೆಗಳ ಕೊಂಡಿಗಳನ್ನು ಕವಿ ಇಲ್ಲಿ ಪೋಣಿಸ ಹೊರಟಿದ್ದಾರೆ. ಹಾಗೆಯೇ ಒಂದಿಷ್ಟು, ಬದುಕಿನ ಕಸುವನ್ನು ಹುಡುಕ ಹೊರಟಿರುವ ಇವರ ಕವಿತೆಗಳು, ನಿಸರ್ಗ- ಸಂಸ್ಕೃತಿ ನೆರೆ ಹೊರೆಯ ನಿತ್ಯ ಸತ್ಯ ದರ್ಶನಗಳನ್ನು ಮಂತ್ರ ಶಕ್ತಿಯಾಗಿ ಬಳಸಿ ಕೊಂಡಿವೆ.
ಲೇಖಕ ಬಿ ಟಿ ಮಂಜುನಾಥ ಇವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರು ಗ್ರಾಮದವರು. ತಂದೆ ತಿಪ್ಪೇಶಪ್ಪ ತಾಯಿ ಸಾಕಮ್ಮ. ಕುವೆಂಪು ವಿಶ್ವವಿದ್ಯಾಲಯದಿಂದ ಎಂ ಇಡಿ ಮತ್ತು ಕನ್ನಡ ಎಂ ಎ ಪದವೀಧರರು. ಆದೇ ವಿಶ್ವವಿದ್ಯಾಲಯದಿಂದ ದೇವನೂರು ಮತ್ತು ನಾಗವಾರರ ಸೃಜನಶೀಲ ಸಾಹಿತ್ಯದಲ್ಲಿ ಸಮಾಜವಾದದ ಆಶಯಗಳು ವಿಷಯವಾಗಿ ಪಿ ಹೆಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು. ವೃತ್ತಿಯಿಂದ ಶಿಕ್ಷಕರು. ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಕಾವ್ಯ ಕುಸುಮ (ಕವನ ಸಂಕಲನ) ...
READ MORE"ನೀವೆ ಹೇಳಿರಿ" ಹೂದಳಗಳ ನಿಮ್ಮ ಪಾದಕ್ಕೆರಚಿದ ನಮಗೆ ಬಂದೂಕು ಲಾಟಿಗಳ ಬಳಸಿ ರಕ್ತವರಿಸಿದಿರಿ ಬೆವರಹನಿಗಳಲ್ಲೆ ನಿಮ್ಮ ತಂಪಗಿರಿಸಿದ್ದಕ್ಕೆ ಹಳಸಿದ ಅನ್ನವನೆ ನಮಗೆ ಗತಿ ಮಾಡಿದಿರಿ ನಾವು ಮಾಡಿದ್ದು ತಪ್ಪೆ ನೀವೆ ಹೇಳಿರಿ ಭೂಮಿ ಕಸಿದು ಬೀದಿಗಟ್ಟಿದಿರಿ ನೋವ ಕಂಡು ನಗುವ ಬೀರಿದಿರಿ ನಿಮ್ಮನೆ ದೈವವೆನಿಸಿದ ನಮಗೆ ರಕ್ಷಿಸಿ ಕಾಪಿಡದೆ ಏಕಿಷ್ಟು ಶಪಿಸಿದಿರಿ ನಾವು ಮಾಡಿದ್ದು ತಪ್ಪೆ ನೀವೆ ಹೇಳಿರಿ ನಾವು ಶಿರಬಾಗಿ ನಮಿಸಿದಾಗ ನಿಮ್ಮ ಪಾದವನೆಮ್ಮ ಶಿರಕ್ಕಿಟ್ಟು ತುಳಿದೆ ಬಿಟ್ಟಿರಿ ಒಡೆಯ ಒಡೆಯನೆಂದು ಸಮೀಪಿಸಿದಾಗ ನಾಲಗೆಯನೆ ಸೀಳಿಬಿಟ್ಟಿರಿ ನಾವು ಮಾಡಿದ್ದು ತಪ್ಪೆ ನೀವೆ ಹೇಳಿರಿ ಮರುಳು ಮಾತು ಭ್ರಮೆಯ ತುಂಬಿ ಕನಸ ಕೇಡಿಸಿ ಕೇಕೆ ಹಾಕಿದಿರಿ ಜತನವಾಗಿದ್ದ ಜೀವವ ತೆಗೆದು ರಕ್ತ ಹೀರಿ ಘೋರಿ ಕಟ್ಟಿದಿರಿ ನಾವು ಮಾಡಿದ್ದು ತಪ್ಪೆ ಇನ್ನಾದರೂ ಯೋಚಿಸಿರಿ.
-ಬಾಗೂರು ಮಂಜುನಾಥ