‘ಕೆಂಪು ಕೊರಳ ಹಕ್ಕಿ’ ಕೃತಿಯು ಶ್ರೀರಾಜ್ ಎಸ್. ಆಚಾರ್ಯ(ಕಾವ್ಯ ಬೈರಾಗಿ)ಅವರ ಕವನಸಂಕಲನವಾಗಿದೆ. ಈ ಕವಿತೆಗಳಲ್ಲಿನ ಬೆಳಕು ಕೆಲವೊಮ್ಮೆ ಬದುಕಿನ ದರ್ಶನ ಮಾಡಿಸುವಂತಿದ್ದರೆ, ಕೆಲವೊಮ್ಮೆ ಕತ್ತಲ ಗೆರೆಗಳ ಮೀರಲಾಗದೆ ಅಲ್ಲಿಯೇ ನಿಲ್ಲುತ್ತದೆ. ಜೀವನದ ವಿವಿಧ ಆಯಾಮಗಳನ್ನು ಕುತೂಹಲದ ಕಣ್ಣಿಂದ ನೋಡುತ್ತ, ಸರಳವಾಗಿ ಸೂಕ್ಷ್ಮವಾಗಿ ನಮ್ಮೆಡೆಗೆ ದಾಟಿಸುತ್ತಾರೆ. ‘ಹಸಿವು ಬದುಕಿದೆ, ಸತ್ತಿಲ್ಲ”, “ಮೆಲು ದನಿಯ ಧಿಕ್ಕಾರ” ಎನ್ನುವಂತಹ ತುಸು ಆಕ್ರೋಶಭರಿತ ಕವಿತೆಗಳನ್ನು ಕೂಡ ಇಲ್ಲಿ ಎದುರಿಗಿಸುತ್ತಾರೆ. ಪದೇ ಪದೇ ಕಾಡುವ ಕಡಲು, ಬಿಸಿಲು, ದಾರಿ, ಹಕ್ಕಿ, ಮೋಡ, ಮಳೆ ಇವೆಲ್ಲವೂ ಇಲ್ಲಿಯ ಕವಿತೆಗಳ ಆವರಣಗಳಾಗಿವೆ.
ಶ್ರೀರಾಜ್ ಎಸ್. ಆಚಾರ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯವರು. 1997 ಆಗಸ್ಟ್ 17 ರಂದು ಜನನ. `ಕಾವ್ಯ ಬೈರಾಗಿ' ಎನ್ನುವ ಕಾವ್ಯ ನಾಮದಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಭಂಡಾರ್ ಕಾರ್‍ಸ್ ಕಾಲೇಜು ಕುಂದಾಪುರ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಅವರು ಉಡುಪಿಯ ಸ್ಥಳಿಯ ದೃಶ್ಯ ಮಾಧ್ಯಮ “ಪ್ರೈಮ್ ಟಿವಿ”ಯಲ್ಲಿ ಮೂರು ವರ್ಷಗಳ ...
READ MORE