ನನ್ನ ನಾಕ

Author : ವೆಂಕಟೇಶ ಗುಡೆಪ್ಪನವರ

₹ 110.00




Year of Publication: 2010
Published by: ಶ್ರೀ ಸಾಯಿ ಪ್ರಕಾಶನ
Address: ಬೆಂಗಳೂರು
Phone: 9902457371

Synopsys

ಕವಿ ವೆಂಕಟೇಶ ಪಿ. ಗುಡೆಪ್ಪನವರ ಅವರು ಕವನ ಸಂಕಲನ-ನನ್ನ ನಾಕ.ಈ ಸಂಕಲನದಲ್ಲಿ 104 ಕವನಗಳಿವೆ. ಸಾಹಿತಿ ಡಾ.ಅಶೋಕ ನರೋಡೆ ಅವರು ಕೃತಿಗೆ ಮುನ್ನುಡಿ ಬರೆದು ‘ಸಹಜವಾಗಿ ತುಂಬ ಸರಳವಾಗಿ ಹಾಗೂ ಲೀಲಾಜಾಲವಾಗಿ ಬರವಣಿಗೆ ಮಾಡಿರುವುದು ಕಂಡುಬರುತ್ತದೆ. ಕವನಗಳು ಪ್ರಬುದ್ಧವಾಗಿವೆ.  ಪರಿಸರ, ಜಾತಿಪ್ರೀತಿ , ಸಂಕ್ರಮಣ, ಸುಧಾರಕ , ವಿಷಭೂಮಿ , ಹಸುಕರು , ರೈತಹತ್ಯೆ , ಮೋಸದಾಟ, ಸ್ವಾಭಿಮಾನಿ , ನವಶಕ್ತಿ, ಹೊನ್ನಶೂಲ, ಕ್ರಾಂತಿಸಿರಿ, ಭೂಮಿತಾಯಿ , ಮನುಷ್ಯತ್ವ , ಬದಲಾಗು , ಕಾರ್ಮಿಕರು, ಸಂವಿಧಾನ , ಪ್ರಜಾತಂತ್ರ ಇವೆ ಮೊದಲಾದ ಕಾವ್ಯ ಶೀರ್ಷಿಕೆ ಅವಲೋಕಿಸಿದರೆ ಈ ಕಾವ್ಯಗಳ ವೈವಿಧ್ಯತೆ, ಸಾಮಾಜಿಕ ಕಾಳಜಿ, ಸಮಷ್ಠಿ ಪ್ರಜ್ಞೆ, ಸುಮಾಜ ಸುಧಾರಕನ ಕನವರಿಕೆ ಮನದಟ್ಟಾಗುತ್ತದೆ.ಕವಿತೆಗಳಲ್ಲಿ ವ್ಯಕ್ತಿ ಚಿತ್ರಗಳು ಅರ್ಥಪೂರ್ಣವಾಗಿ ಅರಳಿವೆ. ಕೆಲವು ರಚನೆಗಳಲ್ಲಿ ಪ್ರಗತಿಪರ ನಿಲುವಿದೆ, ವೈಚಾರಿಕತೆ ಇದೆ.. ಬಂಡಾಯ ಕಾವ್ಯದ ಲಕ್ಷಣಗಳು ಇವೆ. ಗ್ರಾಮೀಣ ಸೊಗಡಿದೆ. ದೇಶೀಯ ತಾಜಾತನ ಇದೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ವೆಂಕಟೇಶ ಗುಡೆಪ್ಪನವರ
(09 July 1985)

ಲೇಖಕ ವೆಂಕಟೇಶ ಪಿ. ಗುಡೆಪ್ಪನವರ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದವರು. ಮುಧೋಳದ ಶ್ರೀ ಸಂಗಮನಾಥ ಪ್ರೌಢಶಾಲೆಯ ಮುಖ್ಯೋಪಾಧ್ಯಯರು. ‘ನನ್ನ ನಾಕ’ ಎಂಬುದು ಅವರ ಮೊದಲ ಕವನ ಸಂಕಲನ.  ...

READ MORE

Reviews

 

 

Related Books