ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕ-ಕಾದಂಬರಿಕಾರ ಶಿವರಾಮ ಕಾರಂತರ ಕುರಿತಾಗಿ ಬರೆದ ಕವನಗಳ ಸಂಕಲನ. 1934ರಿಂದ 2001ರವರೆಗೆ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆಯವರು ಬರೆದ ಕವನಗಳು ಈ ಸಂಕಲನದಲ್ಲಿವೆ. ಕಾರಂತರ ಬಗ್ಗೆ ಪ್ರಕಟವಾದ ಮೊದಲ ಕವನವೆಂದರೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ’ಶಿವರಾಮ ಕಾರಂತರನ್ನು ಕುರಿತು, ಇದು 1934ರಲ್ಲಿ ಪ್ರಕಟವಾಯಿತು. ಈ ಕವಿತೆಯೊಂದಿಗೆ ಕಾರಂತರ ನಿಧನದ ನಂತರ ಅವರ ಕುರಿತಾಗಿ ಬರೆದ ಕವನಗಳನ್ನು ಈ ಸಂಕಲನದಲ್ಲಿ ಪ್ರಕಟಿಸಲಾಗಿದೆ.
ಬೋಳಂತಕೋಡಿ ಎನ್ನುವುದು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಒಂದು ಪುಟ್ಟ ಪ್ರದೇಶಕ್ಕೆ ಇರುವ ಹೆಸರು. ಆ ಹೆಸರು ಕನ್ನಡದ ಅಕ್ಷರಗಳು ಇರುವಷ್ಟೂ ದಿನ ಇರಬೇಕೆನ್ನುವ ಹಾಗೆ ಪುಸ್ತಕ ಪ್ರೀತಿಯಲ್ಲಿ ಅದನ್ನು ಶಾಶ್ವತಗೊಳಿಸಿದವರು, ಅಲ್ಲಿ ಹುಟ್ಟಿ ಬೆಳೆದ ಈಶ್ವರ ಭಟ್ಟರು. ವಿಶ್ವವಿದ್ಯಾನಿಲಯಗಳು ಪ್ರಕಟನೆಗೆ ಉತ್ಸಾಹ ತೋರಿಸಬೇಕಿದ್ದ "ಉಗ್ರಾಣ ಸಾಹಿತ್ಯ", ಎಂ.ಎನ್. ಕಾಮತ್ ಸಾಹಿತ್ಯ'ದಂಥ ಬೃಹತ್ ಸಾಹಿತ್ಯ ಸಂಪುಟಗಳ ಜೊತೆ ನೂರಾರು ಮೌಲಿಕ ಸಾಹಿತ್ಯ ಕೃತಿಗಳ ಪ್ರಕಟಣೋತ್ಸವವನ್ನೇ ಕೈಕೊಂಡ ಅಪರೂಪದ ಸಾರ್ಥಕ ಬದುಕು ಅವರದು. ಅಣ್ಣಂದಿರಾದ ಬಿ.ಎಂ. ಶರ್ಮ, ಬಿ. ಶಂಕರ ಭಟ್ಟರು, ಇವರು ಚಿಕ್ಕವರಿದ್ದಾಗಲೇ ಕನ್ನಡ ಪ್ರಪಂಚ ಪ್ರಕಾಶ ...
READ MORE