ಯಮುನಾ ಗಾಂವ್ಕರ್ ಅವರ ’ಅಬ್ಬೆ ಮಡಿಲು’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ವಸುಂಧರಾ ಭೂಪತಿ ಅವರು, ಜೀವ-ಜೀವನ ಸಂಘರ್ಷದ ಕಾವ್ಯ ಉರಿವ ಕೊಳ್ಳಿಯನ್ನು ತನ್ನೊಡಲಲ್ಲಿ ತುಂಬಿಕೊಂಡು ಬೆಳಕು ಸೂಸುವ ಪರಿ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಹೋರಾಟಗಾರ್ತಿಯಾದ ಯಮುನಾ ಗಾಂವ್ಕರ್ ರವರ ಲೇಖನಿ ಕತ್ತಿಯಲುಗಿನಷ್ಟೇ ಹರಿತವಾಗಿದೆ. ಹಸಿವು, ಬಡತನ, ಲಿಂಗ ತಾರತಮ್ಯ, ಸಾಮಾಜಿಕ ಅಸಮಾನತೆ, ವರ್ಗ ವರ್ಣಗಳ ಸಂಘರ್ಷಗಳೆಲ್ಲವೂ ಇಲ್ಲಿ ಕವಿತೆಗಳಾಗಿ ಹೊರಹೊಮ್ಮಿವೆ. ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ಮೇಲೆ ಜರಗುತ್ತಿರುವ ತಣ್ಣನೆಯ ಕ್ರೌರ್ಯವನ್ನು ಪ್ರತಿಮಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಕಂಬಾಲಪಲ್ಲಿಯಿಂದ ಹಿಡಿದು ಜಪಾನ್ ನ ನಾಗಸಾಕಿಯವರೆಗೂ ಪಸರಿಸಿದ ಶೋಷಣೆಯ ಹಂದರ, ಯುದ್ದೋನ್ಮಾದ ವಿಶ್ವದಾದ್ಯಂತ ವಿಸ್ತರಿಸಿಕೊಂಡ ಪರಿಯನ್ನು ಕಾವ್ಯದ ಮೂಲಕ ಯುಮುನಾ ಮಾತನಾಡುವ ರೀತಿ ತಲಸ್ಪರ್ಶ್ಯ. ’ ಅಬ್ಬೆ ಮಡಿಲು’ ಸಂಕಲನದ ಕವಿತೆಗಳಲ್ಲಿ ಮಾನವೀಯತೆ ಮೂಲದ್ರವ್ಯವಾಗಿದ್ದು ಜೀವ ಜೀವನ ಪ್ರೀತಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿವೆ. ಪ್ರತಿಯೊಬ್ಬ ಮನುಷ್ಯನೂ ಘನತೆಯಿಂದ ಬದುಕಲು ಸಾಧ್ಯವಾಗುವಂತಹ ಸಮ-ಸಮಾಜದ ನಿರ್ಮಾಣಕ್ಕೆ ಕಾವ್ಯದ ಮೂಲಕ ಬದುಕು ಕಟ್ಟಿಕೊಳ್ಳಲು ಗಾಂವ್ಕರ್ ಸಫಲರಾಗಿದ್ದಾರೆ ಎಂದಿದ್ದಾರೆ.
ಕವಯತ್ರಿ ಯಮುನಾ ಗಾಂವ್ಕರ್, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದವರು. 1975 ಫೆಬ್ರುವರಿ 01 ರಂದು ಜನನ. ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದು, ವೃತ್ತಿಯಿಂದ ವಕೀಲರು. ಜನಶಕ್ತಿ, ಕರಾವಳಿ ಮುಂಜಾವು, ವಿಜಯ ಕರ್ನಾಟಕ, ಸಮಾಜಮುಖಿ, ಲೋಕಧ್ವನಿ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಸುತ್ತಮುತ್ತ ಒಂದು ಸುತ್ತು- ವಿವಿಧ ಲೇಖನಗಳ ಸಂಕಲನ, ಜನದನಿ (ಹೋರಾಟದ ಹಾಡುಗಳ ಸಂಪಾದನೆ), ನಿಜದನಿ (ಹೋರಾಟದ ಹಾಡುಗಳ ಸಂಪಾದನೆ), ಉಯಿಲಿಗೆ ಸಹಿ ಹಾಕಿ (ಕವನ ಸಂಕಲನ), ಅಬ್ಬೆ ಮಡಿಲು (ಕವನ ಸಂಕಲನ), ಜೋಯ್ಡಾ: ಕಾಡೊಳಗಿನ ಒಡಲು (ಮಾನವಿಕ ಅಧ್ಯಯನ ಗ್ರಂಥ) - ...
READ MORE