ತೂಗಿ ತೊನೆದಾವೋ ತೆನೆಗಳು

Author : ದೊಡ್ಡರಂಗೇಗೌಡ

Pages 352

₹ 380.00




Year of Publication: 2018
Published by: ಸಖೀಗೀತ ಪ್ರಕಾಶನ
Address: ಎನ್. ಆರ್. ಕಾಲೋನಿ, ಬೆಂಗಳೂರು-560019

Synopsys

‘ತೂಗಿ ತೊನೆದಾವೋ ತೆನೆಗಳು’- ಕವಿ ದೊಡ್ಡ ರಂಗೇಗೌಡರ ಕವನ ಸಂಕಲನ. ಇಲ್ಲಿ ಒಟ್ಟು 250 ಕವನಗಳಿವೆ. ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಈ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ತೂಗಿ ತೊನೆದಾವೋ ತೆನೆಗಳು-ಅವರ ಕಾವ್ಯದ ಸದ್ಯದ ಮೀಮಾಂಸೆಯ ನಿಲುವನ್ನು ಈ ಹೆಸರು ಸೂಚಿಸುವಂತಿದೆ. ಪೈರಿಗೆ ಸಹಜವಾಗಿ ಒಡೆದ ತೆನೆಗಳಂತೆ ಅವರ ಪದ್ಯಗಳು ಸಹಜವಾಗಿ ಅವರ ವ್ಯಕ್ತಿತ್ವದಿಂದ ಹೊರಹೊಮ್ಮುತ್ತವೆ. ಬೀಸುವ ಗಾಳಿಗೆ ತೊನೆದಾಡುತ್ತವೆ. ಆ ರಚನೆಗಳ ಭಾಷೆ, ರೂಪಕ ಸಾಮಗ್ರಿ, ಮಣ್ಣಿನ ಗಂಧ ಎಲ್ಲವೂ ಸಹಜ ಕೃಷಿಯ ಉತ್ಪನ್ನಗಳೇ ಆಗಿವೆ ಎಂದು ಅಭಿಪ್ರಾಯಪಟ್ಟು, ಕೆಲವು ಕವಿತೆಗಳು ಪ್ರಕೃತಿಯ ಚೆಲುವು ಮತ್ತು ರುದ್ರ ವಿಲಾಸವನ್ನು ಬಣ್ಣಿಸುತ್ತವೆ ಎಂದು ಪ್ರಶಂಸಿಸಿದ್ದಾರೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books