ಭಾದ್ರಪದ ಚೌತಿಯ ಗಣೇಶನ ನಿರೀಕ್ಷೆಯಲ್ಲಿರುವ ಕವಿಯ ಮನದಾಳ, ಆ ಮೂಲಕ ಶುದ್ಧ ಗಾಳಿ, ಶುದ್ದ ಪರಿಸರದ ನಿರೀಕ್ಷೆಯಲ್ಲಿದೆ. ಅವರು ಆಹ್ವಾನಿಸುತ್ತಿರುವುದು ಮೂಷಿಕವಾಹನನ್ನೇ ಆಗಿದ್ದರೂ, ಆ ಆಹ್ವಾನದ ಹಿಂದಿರುವುದು ಭ್ರಷ್ಟಾಚಾರ, ಅಕ್ರಮ ರಹಿತವಾದ ಒಂದು ಸಮಾಜ. ಅವರ ಆಧ್ಯಾತ್ಮಿಕತ ಲೌಕಿಕತೆಯೊಂದಿಗೆ ತಳಕು ಹಾಕಿಕೊಳ್ಳುವುದು ಹೀಗೆ. ಇರುವೆಯೊಂದನ್ನು ತಮ್ಮ ಕವಿತೆಗೆ ವಸ್ತುವಾಗಿಸಿಕೊಂಡು ಬರೆಯುವ ಕವಿ, ಅದರ ಸ್ವಾತಂತ್ರ, ಶ್ರಮ, ಶಿಸ್ತು, ಸಹಭಾಗಿತ್ವವನ್ನು ಬರೆಯುತ್ತಾ ಮನುಷ್ಯ ಸ್ವಾರ್ಥವನ್ನು ವ್ಯಂಗ್ಯ ಮಾಡುತ್ತಾರೆ. ಸಮಯದ ಜೊತೆಗೆ ಮಾತಿಗೆ ತೊಡಗುವ ಕವಿ, ಈ ಕ್ಷಣವಷ್ಟೇ ನಮ್ಮದು ಎನ್ನುವುದನ್ನು ಅರಿತುಕೊಂಡಿದ್ದಾರೆ. ಮಳೆ ಹನಿಯ ತುಂತುರನ್ನು ಬರೆಯುತ್ತಾ ಹೋದಂತೆ ಅದು ಕವಿಮನ ಘಾಸಿಗೊಂಡು ಇಳಿಯುವ ಕಣ್ಣೀರ ತುಂತುರುಗಳಾಗಿ ಬದಲಾಗುವುದು ಇಲ್ಲಿನ ಕವನಗಳ ವೈಶಿಷ್ಟ್ಯ.
ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರು ಮುಂಬಯಿಯ ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಮುಂಬಯಿಯಲ್ಲಿ ನಾಟಕಕಾರ, ನಿರ್ದೇಶಕ, ಸಾಹಿತಿ ಎಂದು ಗುರುತಿಸಲಾಗುವ ಅವರಿಗೆ ಅನೇಕ ಪ್ರಶಸ್ತಿಗಳು ದೊರೆತಿವೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಶಿಮಂತೂರು ಗ್ರಾಮದ ಚಂದ್ರಹಾಸ ಸುವರ್ಣ ಅವರು ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ನೆಲೆಸಿ, ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕರ್ನಾಟಕ ಹೊಮಿಯೋಫಥಿ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಪಡೆದಿರುತ್ತಾರೆ. ಉಡುಪಿ ತುಳುಕೂಟ ತುಳು ಕಥಾ ಪ್ರಶಸ್ತಿ, ಮುಂಬಯಿ ಅಕ್ಷಯ ಮಾಸಪತ್ರಿಕೆ ಸಾಹಿತ್ಯ ಪ್ರಶಸ್ತಿ, ...
READ MORE