ಕೆಲವೇ ಕೆಲವು ಸಾಲುಗಳಲ್ಲಿ ವಿಸ್ತಾರವಾದ ಅರ್ಥವನ್ನು ಹೇಳಿ ಬಿಡುವ ಸಾಮರ್ಥ್ಯ ಹನಿಗವನಗಳಿಗಿದೆ.ನಮ್ಮ ಜಾನಪದ ಗೀತೆಗಳು, ಸರ್ವಜ್ಞನ ತ್ರಿಪದಿಗಳು, ಅಲ್ಲಮ, ಬಸವಣ್ಣರ ಹಾಗೂ ಅಕ್ಕನ ವಚನಗಳು ಎಲವೂ ಚುಟುಕಿನಲ್ಲೇ ಇದೆ. ಎರಡು ಮರಗಳ ಕಿತ್ತಾಟದ ಕಾಡ್ಗಿಚ್ಚು ಇಡೀ ಕಾಡನ್ನು ಧ್ವಂಸಗೊಳಿಸಿದರೆ, ಇಬ್ಬರ ವ್ಯರ್ಥವಾದ ಜಗಳ ಇಡೀ ಸಮಾಜವನ್ನೇ ಕಲುಷಿತಗೊಳಿಸುತ್ತದೆ.ಚಿಕ್ಕದಾದರೂ ಸಮಾಜದ ಅಗು ಹೊಗು ಗಂಭೀರವಾದ ಅರ್ಥಗಳನ್ನು ನಿಡುತ್ತದೆ.ಇಂತಹಾ ವಿಭಿನ್ನ ಅರ್ಥಗಳನ್ನು ಕಲ್ಪಸುವ ಸುಮಾರು 200ಕ್ಕು ಹೆಚ್ಚು ಚುಟುಕುಗಳು ಈ ಕೃತಿಯಲ್ಲಿದೆ.
ಜರಗನಹಳ್ಳಿ ಶಿವಶಂಕರ್ ಅವರು ಬೆಂಗಳೂರಿನ ಜರಗನಹಳ್ಳಿಯಲ್ಲಿ 1949 ಸೆಪ್ಟೆಂಬರ್ 8ರಂದು ಜನಿಸಿದರು.ಬಿ.ಕಾಂ ಪಧವಿದರರಾಗಿದ್ದ ಅವರು ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಒಲವಿನ ಕ್ಷೇತ್ರ. ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಪುಸ್ತಕ ಪ್ರಕಾಶನವೊಂದನ್ನು ಆರಂಭಿಸಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ 'ಶುಭಾಂಗಿ ಝರಿ; ದೇವರ ನೆರಳು, ಎರೆಹುಳ, ಆಲಿಕಲ್ಲು ಮುಂತಾದವು. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು 2021 ಮೇ 05 ರಂದು ಕೊರೋನಾ ಸೋಂಕಿಗೆ ಬಲಿಯಾಗಿ ನಿಧನರಾದರು. ಕೃತಿಗಳು: ಬುಗ್ಗೆ, ಮರಗಳೂ, ಮಳೆ, ಆಯ್ದ ಹನಿಗವಿತೆಗಳು, ವಚನ ಧ್ಯಾನ, ...
READ MORE