ಲೇಖಕ ಡಾ.ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ರಚಿಸಿದ ಕವನ ಸಂಕಲನ-ಕರುಳುಬಳ್ಳಿ. ಒಟ್ಟು 71 ಕವನಗಳಿವೆ. ಹೆತ್ತ ಕರುಳು ಹುಟ್ಟಿದ ಪರಿಸರ ಮತ್ತು ಲೋಕಜೀವನದ ಕಕ್ಷೆಯಲ್ಲಿ ಬರುವ ವಿಷಯಗಳು ಕವಿತೆಗಳ ವಸ್ತುಗಳಾಗಿವೆ. ಸಮಾಜ, ಕುಟುಂಬವು ನೆಮ್ಮದಿ ಹೇಗೆ ಪೂರಕ, ನೆಲದೊಂದಿಗೆ ಸಂಬಂಧ ಎಷ್ಟು ಮುಖ್ಯ ಎಂಬುದನ್ನು ಕವಿತೆಗಳಲ್ಲಿ ಚಿತ್ರಿಸಲಾಗಿದೆ. ಬದುಕಿನ ಕಣಜ ಗೊಂದಲದ ಗೂಡು ಆಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆಯೂ ಕವಿತೆಯ ಭಾಗವಾಗಿದೆ. 12ನೇ ಶತಮಾನದ ಶರಣರ ವಿಚಾರಗಳ ಪಾಲನೆಯ ಅಗತ್ಯವನ್ನು ಕವಿತೆಗಳು ಪ್ರತಿಪಾದಿಸುತ್ತವೆ.
ಲೇಖಕ ಡಾ. ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ಬೀದರ ಜಿಲ್ಲೆಯ ಮೀನಕೇರಿ ಗ್ರಾಮದವರು. ತಂದೆ ಶಿವರಾಜ ಮಟ್ಟಿ, ತಾಯಿ ಗಂಗಮ್ಮ ಮಟ್ಟಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಮನಾಬಾದಿನಲ್ಲಿ ಬಿಎ ಪದವಿ ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ ಪಡೆದರು. ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ ಕಥಾಸಂಕಲನದ ಮೇಲೆ ಎಂ.ಫಿಲ್ ಹಾಗೂ ವಚನಕಾರ ಉರಿಲಿಂಗ ಪೆದ್ದಿ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಕೃತಿಗಳು: ತ್ಯಾಗಜೀವಿ, ಕರುಳಬಳ್ಳಿ (ಕವನ ಸಂಕಲನಗಳು) ಜನಪದ ಸಾಹಿತ್ಯ, (ಗುಲಬರ್ಗಾ ವಿ.ವಿ. ಪದವಿ ತರಗತಿಗೆ ಪಠ್ಯವಾಗಿದೆ). ಇವರು ಬರೆದ ಲೇಖನಗಳು, ...
READ MORE