40 ಕವಿತೆಗಳ ಗುಚ್ಚ ’ಬರುವೆ ನಿಮ್ಮ ಹೃದಯಕೆ’. ಪ್ರಾಣಿ, ಪಕ್ಷಿ ಕೀಟಾದಿಗಳಿಗಿಂತ ಭಿನ್ನವಾಗಿ ರೂಪಧಾರಣೆ ಮಾಡಿ, ಆ ರೂಪದ ಕಾರಣದಿಂದಲೇ ಮನುಷ್ಯರೊಳಗೆ ಕಾವ್ಯವು ಮಾನವೀಯ ಮೌಲ್ಯಗಳನ್ನು ತುಂಬಿಕೊಂಡ ನಿಜವಾದ ಮನುಷ್ಯನನ್ನು ಅನಾವರಣಗೊಳಿಸುವ ಶಕ್ತಿಯನ್ನು ಹೊಂದಿದೆ ಎನ್ನುವ ಮಹತ್ವದ ಆಶಯವನ್ನು ಪ್ರತಿಪಾದಿಸಲಾಗಿದೆ. ಮಾನವೀಯತೆಯನ್ನು ತನ್ನೊಳಗೆ ತುಂಬಿಕೊಂಡಿರುವ ಕಾವ್ಯವು ಕವಿಯ ಮುಖೇನ ಎಲ್ಲರ ಹೃದಯಗಳಿಗೆ ಪ್ರವೇಶಿಸುವ ಮತ್ತು ವರ್ತಮಾನದ ಪ್ರಕ್ಷುಬ್ಧತೆ ತಲ್ಲಣಗಳಿಗೆ ಔಷಧಿಯಾಗಿ, ತನ್ನ ಅಸ್ತಿತ್ವವಿರುವ ಪರಿಸರವನ್ನು ಸಾಮಾಜಿಕ ಬದಲಾವಣೆಯ ಹರಿಕಾರನಾಗುವ ಒಲವನ್ನು ಇಲ್ಲಿನ ಕವಿತೆಗಳು ಪ್ರಕಟಪಡಿಸಿವೆ.