ಜಗದೀಶ ಬ ಹಾದಿಮನಿ ಅವರ ಕವನ ಸಂಕಲನ ’ಇರುವ ನಾಕುದಿನ’. ಕೃತಿಗೆ ಬೆನ್ನುಡಿ ಬರೆದ, ಅಬ್ಬಾಸ್ ಮೇಲಿನಮನಿ ಅವರು, ’ಸುಮ್ಮನೇ ಹುಟ್ಟುವುದಿಲ್ಲ ಕಾವ್ಯ.. ಲೋಕಾನುಭವ -ಅನುಭಾವಗಳ ಒಟ್ಟಾಸೆ ಕಾವ್ಯ ಕಾರಣವಾಗಿ ಕವಿಯಿಂದ ಬರೆಸಿಕೊಳ್ಳುತ್ತದೆ. ಅಂಥ ಕಾವ್ಯವೇ ಅಮೃತ ಫಲವಾಗಿ ಭೂಮಿಯನ್ನು ಹಸಿರುಗೊಳಿಸಿ, ಜೀವದೊಡಲನ್ನು ಉಸಿರಾಡಿಸುವಂತೆ ಮಾಡುತ್ತದೆ. ನೊಂದ ಮನಸಂತೈಸಿ, ಬದುಕಿನ ಭರವಸೆಯೊಂದಿಗೆ ಖುಷಿ ನೀಡುತ್ತದೆ. ಈ ತರದಲ್ಲಿ ಕವಿ ಜಗದೀಶರ ಕಾವ್ಯ ಅರಳಲು ನೋಡುತ್ತದೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ. ಕೃತಿಗಳು: ...
READ MORE