ಜಗದೀಶ ಬ ಹಾದಿಮನಿ ಅವರ ಕವನ ಸಂಕಲನ ’ಮುಗ್ಧೆ ’ ಕೃತಿಗೆ ಮುನ್ನುಡಿ ಬರೆದ ಎಸ್ಕೆ ಕೊನೆಸಾಗರ, ’ಪ್ರೇಮದ ವಾಂಛೆ, ಉತ್ಕಟತೆ, ಪರಿಸರದ ಕಾಳಜಿ, ಕನ್ನಡದ ಹೆಮ್ಮೆ, ಮಾನವೀಯ ತುಡಿತ, ಪ್ರಸ್ತುತ ಸಮಾಜದ ಢೋಂಗಿತನ ಅನೇಕ ಕವಿತೆಗಳಲ್ಲಿ ಅನುರಣಿಸುತ್ತವೆ. ತತ್ವಜ್ಞಾನದ ಬೋಧೆಯು ಅಲ್ಲಲ್ಲಿ ಇಣುಕಿಕೊಂಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ. ಕೃತಿಗಳು: ...
READ MORE