‘ಕ್ಯಾಮೆರಾ ಕಣ್ಣು’ ಲೇಖಕ ಬಿ.ಆರ್. ಲಕ್ಷ್ಮಣ ರಾವ್ ಅವರ ಈವರೆಗಿನ ಕವಿತೆಗಳ ಸಂಕಲನ. ಸೃಜನಶೀಲ ಮನಸ್ಸು ಮಾತ್ರ ಸಮಕಾಲೀನ ಸಮಸ್ಯೆಗಳಿಗೆ, ಹೊಸ ಸವಾಲುಗಳಿಗೆ ಸಮರ್ಥವಾಗಿ ಮುಖಾಮುಖಿಯಾಗಬಲ್ಲದು- ಈ ನಂಬಿಕೆ, ಈ ಹುಡುಕಾಟ ಲಕ್ಷಣರಾವ್ ಅವರ ಕಾವ್ಯವನ್ನು ಜೀವಂತವಾಗಿಸಿರಿಸಿದೆ ಎನ್ನುತ್ತಾರೆ -ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ.
ಲಕ್ಷ್ಮಣರಾವ್ ನಿಸ್ಸಂದೇಹವಾಗಿ ಕನ್ನಡ ಕಾವ್ಯ ಚರಿತ್ರೆಯಲ್ಲಿ ಗಮನಿಸಲೇಬೇಕಾದ ವಿಶಿಷ್ಟ, ಭಿನ್ನ ಆಪ್ತ ಧ್ವನಿ. ಅವರು ಸಹಜ ಕವಿ, ಓದಿ ಸುಖಿಸಬಹುದಾದ ಕವಿ, ಯಾವ ಬಗೆಯ ಒತ್ತಡಗಳಿಗೂ, ಹಂಗಿಗೂ ಒಳಗಾಗದೇ ಮುಕ್ತ ಮನಸ್ಸಿನ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಜೀವನೋಲ್ಲಾಸದ ಕವಿ. ಉಲ್ಲಾಸದ ಅನುಭವ ನೀಡುತ್ತಲೇ, ಸಮಕಾಲೀನ ಸಮಾಜದ ದುರಂತಗಳನ್ನು ತನ್ನದೇ ಆದ ಕಾಮಿಕ್ ರೀತಿಯಲ್ಲಿ ಮಂಡಿಸುತ್ತಾ, ವಿಷಾದದ ಎಳೆಯನ್ನು ಕವಿತೆಯ ಲಯದಲ್ಲಿ ಜೋಡಿಸುವ ಮೂಲಕ ಓದುಗರನ್ನು ಪರಿಭಾವನೆಗೆ ಹಚ್ಚುವಂತೆ ಮಾಡುತ್ತಾರೆ. ಇಲ್ಲಿಯ ಕವಿತೆಗಳಲ್ಲಿ ಕಾವ್ಯದ ಹದವನ್ನು ಕಾಣಬಹುದು.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE