`ಹಾಯಿದೋಣಿ’ ದರ್ಶನ್ ಜಯಣ್ಣರ ಎರಡನೆಯ ಕವನ ಸಂಕಲನ. ಇದರ ಮೂಲ ಧಾತು ಹುಡುಕಾಟ. ಯಾವುದೇ ಉಪಮೆಗಳ ಹಂಗಿಲ್ಲದ ಸಿದ್ಧಾಂತದ ಸೋಗಿಲ್ಲದ ಸರಳ ಭಾಷೆಯ ಸುಲಲಿತ ಕವನಗಳಿವು. ಇಲ್ಲಿ ಓದುಗ ತನ್ನನ್ನು ತಾನು ಕಂಡುಕೊಳ್ಳಬಹುದಾದರೆ ಅಷ್ಟರ ಮಟ್ಟಿಗೆ ಬರವಣಿಗೆ ಸಾರ್ಥಕ್ಯ ಪಡೆಯುತ್ತದೆ ಎಂಬುದು ದರ್ಶನ್ರ ನಂಬಿಕೆ.
ಯುವ ಲೇಖಕ ದರ್ಶನ್ ಜಯಣ್ಣ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು (1985), ಆಡಿ ಬೆಳೆದದ್ದು ಶಾಲೆ ಕಲಿತದ್ದು ತುಮಕೂರು. ವೃತ್ತಿಯಿಂದ 'ಕೆಮಿಕಲ್ ಇಂಜಿನಿಯರ್', ಡಿಗ್ರಿ ಪಡೆದದ್ದು RVCE ಬೆಂಗಳೂರು (2006). ಮೊದಲಿಗೆ ಮಂಗಳೂರಿನ MCF ನಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿ ಕೆಲಸ ನಂತರ ಬೆಂಗಳೂರಿನ GE ಮತ್ತು SABIC ತಂತ್ರಜ್ಞಾನ ಕೇಂದ್ರಗಳಲ್ಲಿ ಸಂಶೋಧಕನಾಗಿ ಕೆಲಸ. ಕಳೆದ ಕೆಲವು ವರ್ಷಗಳಿಂದ ಸೌದಿಯ SABIC ಪೆಟ್ರೋಕೆಮಿಕಲ್ಸ್ ನಲ್ಲಿ 'ಹಿರಿಯ ವಿಜ್ಞಾನಿಯಾಗಿ' ಕಾರ್ಯ ನಿರ್ವಹಣೆ. ಮೊದಲ ಪ್ರಯತ್ನ "ಪದ್ಯ ಸಿಕ್ಕಿತು" ಎಂಬ ಕವನ ಸಂಕಲನ (2018). ವೈವಿಧ್ಯ ಓದು ಮತ್ತು ದೇಶ ಸುತ್ತುವುದು ...
READ MOREಕವಿತೆ ಚಿಟ್ಟೆಯ ಹಾಗೆ. ಅದನ್ನು ಹಿಡಿವ ಮುನ್ನ ಕೊಂಚ ಸಪ್ಪಳ ಮಾಡಿದರೆ ಅದು ತಪ್ಪಿಸಿ ಹಾರಿ ಹೋಗುತ್ತದೆ. ಹಿಡಿದಾಗ ಕೈ ಬಿಗಿಯಾದರೆ ಚಿಟ್ಟೆ ನಲುಗಿ ಸಾಯುತ್ತದೆ. ಆದ್ದರಿಂದಲೇ ನಾಜೂಕಾಗಿ ಅದನ್ನು ಹಿಡಿಯುವುದು ಒಂದು ಕಲೆ. ಆಗ ಮಾತ್ರ ಚಿಟ್ಟೆಯ ನುಣುಪಾದ ಸ್ಪರ್ಶದಾನಂದ ನಮಗೆ ದೊರಕುವುದು. ಆ ಕ್ಷಣಭಂಗುರತೆಯನ್ನು ಅನುಭವಿಸಿ ಚಿಟ್ಟೆಯನ್ನು ಹಾರಲು ಬಿಟ್ಟುಬಿಡಬೇಕು. ಚಿಟ್ಟೆ ಎಂದಿನಂತೆ ಗರಿಬಿಚ್ಚಿ ಹಾರಬೇಕು. ನಾನು ಇಲ್ಲಿ ಮಾಡಿರುವ ಪ್ರಯತ್ನವೂ ಅದೇ ಆದರಲ್ಲಿ ನಾನೆಷ್ಟು ಯಶಸ್ವಿಯಾಗಿರುವೆ ಎಂದು ಹೇಳಲಾರೆ. ಆದರೆ ಒಂದಂತೂ ನಿಜ, ಚಿಟ್ಟೆಯ ನವಿರಾದ ರೆಕ್ಕೆಗಳ ಒಂದಷ್ಟು ಬಣ್ಣ ನನ್ನ ಬೆರಳುಗಳನ್ನು ಮೆತ್ತಿದೆ. ಅದನ್ನು ನಿಮಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನವಷ್ಟೇ ನನ್ನದು.