ಲಂಕೇಶ್ ಮತ್ತು ಇತರ ಕವನಗಳು

Author : ಜೀನಹಳ್ಳಿ ಸಿದ್ಧಲಿಂಗಪ್ಪ

Pages 108

₹ 100.00




Year of Publication: 2020
Published by: ಶ್ರುತಿ ಪ್ರಕಾಶನ
Address: 90, ಬೆಳಕು, ವಿವೇಕನಂದ ಬ್ಲಾಕ್, ಮೈಸೂರು- 570029

Synopsys

‘ಲಂಕೇಶ್ ಮತ್ತು ಇತರ ಕವನಗಳು’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರ ಕವನ ಸಂಕಲನ. ಜನಪದ ಸಾಹಿತ್ಯ ಕ್ಷೇತ್ರದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಕ್ರಿಯಾಶೀಲ ಹೆಜ್ಜೆಗಳನ್ನು ಇಟ್ಟಿರುವ ಜೀವನಹಳ್ಳಿ ಸಿದ್ಧಲಿಂಗಪ್ಪ ಅವರು ಸೃಜನಶೀಲ ಕ್ಷೇತ್ರದಲ್ಲು ಶ್ರಮಿಸುತ್ತಿದ್ದಾರೆ. ಲಂಕೇಶ್ ಮತ್ತು ಇತರ ಕವನಗಳು ಪುಸ್ತಕ ಅವರ ಸೃಜನಶೀಲತೆಗೆ ಹಿಡಿದ ಕನ್ನಡಿಯಂತಿದೆ.

ಭಾವದ ಹದಹೊತ್ತು ಅನುಭವ ಕಟ್ಟುವ, ಅರ್ಥದ ಬೆಡಗು ಒಡಗೂಡಿ ಮಿಡಿಯುವ, ಅಕ್ಷರಗಳ ವಿನ್ಯಾಸದ ಜೋಡಣೆ ಕವಿತೆ. ಈ ಸಂಕಲನದ ಅಂತಹ ಹಲವು ಕವಿತೆಗಳನ್ನು ಒಳಗೊಂಡಿದೆ ‘ಎಲ್ಲರೆದೆಯಲಿ ಕಚಗುಳಿಯಿಡಿಸಿ ಬೆಚ್ಚಗೆ ಕಾವ್ಯದ ಹೊನಲು ಹರಿಸಿದ ಪೋರ’ ಆಪ್ತವಾಗುವ ನುಡಿ ಚಿತ್ರಗಳು ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದ ಕುರುವ ಬಸವರಾಜ್. ಎಳೆಗಣ್ಣಿನ ನೋಟಗಳ ಅಜ್ಜನೊಂದಿಗಿನ ಭಾವ, ಮೌನದ ದುನಿಯಾ, ಮುಖ ಸ್ವರ್ಶದ ನಗೆಯ ಹೊರ ಚಲ್ಲುವಾಗ ಗುಡಿ ಗುಂಡಾರಗಳು ಕದ ತೆರೆಯುತ್ತವೆ ಎಂದು ಪ್ರಶಂಸಿಸಿದ್ದಾರೆ.  ಕವಿ ತಮ್ಮನ್ನು ತಟ್ಟಿ ಕಾಡಿದ ಭಾವಗಳನ್ನು ಕವಿತೆಯಾಗಿಸಿ ಕೊಟ್ಟಿದ್ದಾರೆ. ಸದಭಿರುಚಿಯ ಕವಿತೆಗಳು ಇಲ್ಲಿವೆ.

About the Author

ಜೀನಹಳ್ಳಿ ಸಿದ್ಧಲಿಂಗಪ್ಪ
(17 May 1958)

ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲೂಕಿನ ಜೀನಹಳ್ಳಿಯವರು. ತಂದೆ- ಎಂ. ತೀರ್ಥಪ್ಪ, ತಾಯಿ- ನಿಂಗಮ್ಮ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಜೀನಹಳ್ಳಿಯಲ್ಲಿ ಹಾಗೂ ಪಿ.ಯು.ಸಿಯನ್ನು ನ್ಯಾಮತಿಯಲ್ಲಿ, ಬಿ.ಎ.ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದರು. ಶಿಕಾರಿಪುರ, ಬೆಮಿಲ್ ಖೇಡ(ಹುಮನಾಬಾದ ತಾಲೂಕು) ಅಜ್ಜಂಪುರ ಕಾಲೇಜುಗಳಲ್ಲಿ ಗುತ್ತಿಗೆ ಕನ್ನಡ ಉಪನ್ಯಾಸಕರಾಗಿ(1980-1983) ಕಾರ್ಯನಿರ್ವಹಿಸಿದರು. 1983 ರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬೆಂಗಳೂರು, ಮೈಸೂರಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ...

READ MORE

Related Books