‘ಕೊಲೆಗಾರನ ಪತ್ತೆಯಾಗಲಿಲ್ಲ’ ಲೇಖಕ ಆರ್.ವಿ. ಭಂಡಾರಿ ಅವರ ಕವನ ಸಂಕಲನ. ಈ ಕೃತಿಯಲ್ಲಿ ನನ್ನ ಕವಿತೆ, ನಾವು ಮಾತಾಡತೊಡಗಿದರೆ, ಕೃತಘ್ನರು, ಮಹಾಭಾರತದೊಳಗಿನ ಒಂದು ಕಥೆ, ಗುಲ್ ಮೊಹರ್, ಇತಿಹಾಸ, ಸ್ವಾತಂತ್ರ್ಯ, ಪ್ರಶ್ನೆ, ಅಂಗಡಿಯ ಮುಂದೆ ನಿಂತ ಹುಡುಗ, ದಿನಕರ ದೆಸಾಯಿ, ದೇವಿಕೊಟ್ಟ ಬೆಳಕು, ಮೇಸ್ತ್ರಿ, ಗೋಕರ್ಣೇಶ್ವರ ಹೇಳಿದ್ದು, ಕೊಲೆಗಾರನ ಪತ್ತೆಯಾಗಲಿಲ್ಲ, ಮಾನವಕುಲಂ ತಾನೊಂದೆ ವಲಂ, ಚೋಮನ ಮಕ್ಕಳು, ಅಂಬೇಡ್ಕರ್ ನೆನಪಿಗೆ, ಎದ್ದೇಳು ವಿಠ್ಠಲ ಬೆಳಗಾಯಿತು ಹಾಗೂ ದೀಪಾಪಳಿ ಎಂಬ 23 ಕವಿತೆಗಳು ಸಂಕಲನಗೊಂಡಿವೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MORE