ಶಿವ ಮೆಚ್ಚಿದ ಬೆಟ್ಟದ ಹೂ ರವಿರಾಜ್ ಸಾಗರ್ ಅವರ ಕವನ ಸಂಕಲವಾಗಿದೆ. ಈ ಕವನ ಸಂಕಲನಗಳಲ್ಲಿ ಪುನೀತ್ ಅವರ ಸಮಾಜ ಸೇವೆ, ಸ್ವಯಂ ಶಿಸ್ತು, ಸೇವಾ ಬಧ್ಧತೆಯನ್ನು ನೆನಪಿಸಿಕೊಂಡು ಪ್ರತಿಯೊಂದು ಕವಿತೆಯೂ ಅಭಿಮಾನಿಗಳ ಪ್ರೀತಿಯನ್ನು ಅಪ್ಪುವಿನ ಬದುಕಿನ ವಿವಿಧ ಮಜಲುಗಳನ್ನು ಸಾರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕನ್ನಡನಾಡಿನ 150ಕ್ಕೂ ಹೆಚ್ಚಿನ ಕವಿಗಳಿಂದ ಕವಿತೆಗಳನ್ನು, ಭಾವಗೀತೆಗಳನ್ನು ಬರೆಸಿ ಸಂಪಾದಿಸಿರುವ ಕೃತಿಯಾಗಿದೆ.
ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ...
READ MORE