'ಮಹಾಕಾಲ' ಎಚ್.ಎಸ್. ಶಿವಪ್ರಕಾಶ್ ಅವರ ಕವಿತೆಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ 'ನನ್ನ ‘ಮಹಾಕಾಲ’ ಕವಿತೆಗಳ ಗುಚ್ಛಕ್ಕೆ ಒಂದೆರಡು ಮಾತುಗಳನ್ನು ಬರೆಯಬೇಕೆಂದು ಗೆಳೆಯರಾದ ಕೇಶವ ಮಳಗಿಯವರು ಸೂಚಿಸಿದ್ದಾರೆ. ಹಾಗವರು ಹೇಳದಿದ್ದರೆ ಈ ಮಾತುಗಳನ್ನು ಬರೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ನಾಕು ದಶಕಗಳಿಂದ ನನ್ನ ಕಾವ್ಯವನ್ನು ಗಂಭೀರವಾಗಿ ಮತ್ತು ಪ್ರೀತಿಯಿಂದ ಗಮನಿಸುತ್ತಾ ಬಂದಿರುವ ಅವರ ಸೂಚನೆಯನ್ನು ತೆಗೆದು ಹಾಕಲು ನನಗೆ ಸಾಧ್ಯವಾಗುವುದಿಲ್ಲ. ಕವಿತೆಗಳ ಬಗ್ಗೆ ಮಾತಾಡುವುದು ಈ ಹಿಂದೆಯೂ ಸುಲಭವಾಗಿರಲಿಲ್ಲ. ಆದರೆ ಇಂದು ಈ ಕವಿತೆಗಳ ಬಗ್ಗೆ ಮಾತಾಡುವುದು ಎಂದಿಗಿಂತಲೂ ಕಷ್ಟವಾಗುತ್ತಿದೆ ಯಾಕೆಂದರೆ-ನನಗನಿಸುತ್ತದೆ- ಈ ಕವಿತೆಗಳು ಬಹುಮಟ್ಟಿಗೆ ಮಾತಿನಾಚೆಗಿನ ಮೌನದಲ್ಲಿನ ಅರ್ಥಗಳನ್ನು ಹುಡುಕಹೊರಟಿವೆ. ಆಧುನಿಕ ಯುಗದ ಸಾಹಿತ್ಯ ಚಿಂತನೆಯಲ್ಲಾದ ತಳಹತ್ತ ಮಾರ್ಪಾಟನ್ನು ಥಾಮಸ್ ಮಾನ್ ಹೀಗೆ ಗುರುತಿಸಿದ: ‘ನಮ್ಮ ಯುಗದಲ್ಲಿ ಮಾನವ ತಥ್ಯನೆಂಬುದು ಇತಿಹಾಸವಾಗಿದೆ’ ಕ್ರಮಕ್ರಮೇಣ ಆಧುನಿಕತೆ ಬೆಳೆದಂತೆ ಈ ತೆರನ ಐತಿಹಾಸಿಕ ಪ್ರಜ್ಞೆ ಸಾಹಿತ್ಯ ರಚನೆ ಮತ್ತು ವಿಮರ್ಶೆಯಲ್ಲಿ ಹಾಸುಹೊಕ್ಕಾಯಿತು. ಆದರೆ ಐತಿಹಾಸಿಕ ಪ್ರಜ್ಞೆಗೆ ಸೆಡ್ಡು ಹೊಡೆಯುವ ಹಲವು ಸಾಹಿತ್ಯ ಪಂಥಗಳು ಈ ಸಂದರ್ಭದ ಮೊಟ್ಟೆಯೊಡೆದು ಹೊರಬಂದವು:ಶಸಂಕೇತವಾದ, ಪ್ರತಿಮಾವಾದ, ತಳವಾಸ್ತವವಾದ, ಅಭಿವ್ಯಕ್ತಿವಾದ ಇತ್ಯಾದಿಯಾಗಿ ಎಂದಿದ್ದಾರೆ ಎಚ್.ಎಸ್. ಶಿವಪ್ರಕಾಶ್.
ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...
READ MORE