‘ನನ್ನ ಹಾದಿ’ ಲೇಖಕಿ ಅಕ್ಷಯ ಆರ್. ಶೆಟ್ಚಿ ಅವರ ಕವನ ಸಂಕಲನ. ಈ ಸಂಕಲನದ ಕವಿತೆಗಳು ಕೋಮಲತೆ, ಮಾರ್ದವತೆ, ಅನುಕಂಪಗಳ ನಡುವೆಯೂ ಅದರ ಹಿಂದಿನ ದುಃಖಿತ ನೆಲೆಗಳನ್ನು ಅನಾವರಣಗೊಳಿಸುವಲ್ಲಿ ಹಿರಿದಾದ ಆಶಯವಿರಿಸಿದೆ. ಬಾಳು ಬಗೆಗಿನ ಕನವರಿಕೆಗಳು, ಆಶೋತ್ತರಗಳು, ಸಮಾಜಮುಖಿ ಕಾಳಜಿ ಕಾಣ ಸಿಗುತ್ತದೆ. ಇಲ್ಲಿಯ ಕವಿತೆಯ ಭಾವಗಳು ಭ್ರಮೆಗಳನ್ನು ಸೃಷ್ಟಿಸದೆ ವಿಷಾದದ ಮೂಲಕವೇ ಕನಸುಗಳನ್ನು ಕಟ್ಟುವ ಮಾದರಿಗಳಾಗಿ ಗಮನ ಸೆಳೆಯುತ್ತವೆ.
ಲೇಖಕಿ ಅಕ್ಷಯ ಆರ್. ಶೆಟ್ಟಿ ಅವರು ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು. ಎಂ. ಎ. ಮತ್ತು ಎಂ. ಬಿ. ಎ. ಪದವೀಧರರು. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಕ್ಷಯ ಅವರ ಎರಡನೇ ಕವನ ಸಂಕಲನ "ಬದುಕು ಭಾವದ ತೆನೆ "ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ್ದ 'ಸುಶೀಲಮ್ಮ ದತ್ತಿ ನಿಧಿ ಪ್ರಶಸ್ತಿ' ಹಾಗೂ ಇವರ ಕಥೆಗಳಿಗೆ 'ತ್ರಿವೇಣಿ ಧತ್ತಿ ನಿಧಿ ಪ್ರಶಸ್ತಿ' ಮತ್ತು ಸಾಧನಾ ಪ್ರತಿಷ್ಠಾನದ 'ಬಾಂಧವ್ಯ ಪ್ರಶಸ್ತಿ' ಲಭಿಸಿವೆ. ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಇವರ 'ಹೆಣ್ಣು ಬಂಗಾರದ ಕಣ್ಣು ...
READ MORE