ಜ್ಞಾನಪೀಠ ಪುರಸ್ಕೃತ ಯು. ಆರ್. ಅನಂತಮೂರ್ತಿ ಅವರ 2002ರ ವರೆಗಿನ ಕವಿತೆಗಳು ಇಲ್ಲಿವೆ. ಈ ಸಂಗ್ರಹದ 'ಭಾರತೀಯ ಬೂರ್ಜ್ವಾ ' ಹಾಗೂ 'ಭಿಕ್ಷುಕರು' ಕವಿತೆಗಳನ್ನು ರಾಜಕೀಯ ಕವಿತೆಗಳೆಂದು ಕರೆಯಬಹುದು. 'ಭಿಕ್ಷುಕರು' ಒಂದು ಯಶಸ್ವಿ ಕವಿತೆ, ಈ ಕವಿತೆಯ ಪ್ರಗತಿಶೀಲತೆ ಶರ್ಮರ ಮೊದಮೊದಲಿನ ಕವಿತೆಗಳನ್ನು ನೆನಪಿಸುತ್ತದೆಯಾದರೂ, ಅದರ ನಿಷ್ಠುರ ವಸ್ತುನಿಷ್ಠತೆ ಅನಂತಮೂರ್ತಿಯವರ ಸ್ವಂತದ ಸಾಧನೆಯಾಗಿದೆ. ಅವರ ಕಾವ್ಯದಲ್ಲಿ ದ್ವಂದ್ವದ ಅನುಭವ ಎಲ್ಲ ಕ್ಷೇತ್ರಗಳನ್ನೂ ಒಳಗೊಳ್ಳುವಷ್ಟು ವ್ಯಾಪಕವಾಗಿದೆ. ಕಾಮದ ಸಂದರ್ಭದಲ್ಲಿ ಇದರ ಅಭಿವ್ಯಕ್ತಿಯನ್ನು ‘ಪಾಡು’, ‘ಶ್ರೀ ತುಳಸಿ’, ‘ಮೂಗು’ ಇಂಥ ಕವಿತೆಗಳಲ್ಲಿ ಕಾಣಸಿಗುತ್ತವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE