ಹುಟ್ಟಲಿರುವ ನಾಳೆಗಾಗಿ

Author : ಕೆ.ಎನ್. ಲಾವಣ್ಯ ಪ್ರಭಾ

Pages 60

₹ 50.00




Year of Publication: 2004
Published by: ಭೂಮಿಕ ಪ್ರಕಾಶನ
Address: #1085, ಎಂ.ಐ.ಜಿ. ಪ್ರಗತಿ ಶಾಲೆಯ ಹತ್ತಿರ, ಬೋಗಾದಿ 2ನೇ ಹಂತ, ಮೈಸೂರು- 570006
Phone: 9845037915

Synopsys

‘ಹುಟ್ಟಲಿರುವ ನಾಳೆಗಾಗಿ’ ಕೆ.ಎನ್. ಲಾವಣ್ಯಪ್ರಭ ಅವರ ಕವನ ಸಂಕಲನ. ಕವಿತೆ ಬರೆದ ಅನುಭವದ ಕುರಿತು ಹೇಳುತ್ತಾ.. ‘ಹದಿನಾರು, ಹದಿನೇಳು ವರ್ಷಗಳಿಂದ ಮೊನ್ನೆ ಮೊನ್ನೆಯ ತನಕ ಬರೆದ ಕವಿತೆಗಳಿಲ್ಲಿವೆ. ನನ್ನ ಸೂಕ್ಷ್ಮಾತಿ ಸೂಕ್ಷ್ಮ ಭಾವಗಳಿಗೊಂದು ಮಾತಿನ ನೆಲೆಗಿಂತ ಮಿಗಿಲಾದ ನೆಲೆ ಬೇಕಾಗಿತ್ತು. ಕವಿತೆಯಾಗಿ ಓಲೈಸತೊಡಗಿತು. ಇನ್ನೊಂದಿಷ್ಟು ಗಟ್ಟಿಯಾಗಬೇಕಾದ ಆಳ, ವಿಸ್ತಾರ ಕಡಿಮೆ ಇರುವ ಕವಿತೆಗಳ ಜೊತೆ ಕವಿತೆಯ ಅಂಶ ಉಳಿಸಿಕೊಂಡಿರುವ ಕವಿತೆಗಳೂ ಇಲ್ಲಿವೆ ಎಂಬ ಭರವಸೆಯಿದೆ ಎಂದಿದ್ದಾರೆ ಲಾವಣ್ಯಪ್ರಭ. ಹಾಗೇ ಬರಹ ದಿನೇ ದಿನೇ ಕಡಿಮೆಯಾದಂತಾದಾಗ, ಈಗಾಗಲೇ ಬರೆದು ಚೆಲ್ಲಾಡಿದ್ದ ನನ್ನೊಡಲಲ್ಲಿ ಹುಟ್ಟಿ ನನಗೊಂದು ವ್ಯಕ್ತಿತ್ವ ತಂದಿಟ್ಟ ಕವಿತೆಯ ಕಂದಮ್ಮಗಳಿಗೊಂದು ಗೂಡು ಸೇರಿಸುವ ತವಕವೇ ಈ ಸಂಕಲನಕ್ಕೆ ಪ್ರೇರಣೆ ಎಂದಿದ್ದಾರೆ. ಈ ಕೃತಿಗೆ ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮುನ್ನುಡಿ ಬರಹವಿದೆ.

About the Author

ಕೆ.ಎನ್. ಲಾವಣ್ಯ ಪ್ರಭಾ

ಕವಯತ್ರಿ ಕೆ.ಎನ್.ಲಾವಣ್ಯ ಪ್ರಭಾ ನವೆಂಬರ್ 2 ,1971 ರಂದು ಕನಕಪುರದಲ್ಲಿ ಜನನ.ಅಲ್ಲಿಯ ರೂರಲ್ ಕಾಲೇಜಿನಲ್ಲಿ ಬಿಎಸ್ಸಿ ವರೆಗೆ ವ್ಯಾಸಂಗ. ಇಂಗ್ಲಿಷ್ ಅಧ್ಯಾಪಕರಾಗಿದ್ದ ಹೆಸರಾಂತ ಕವಿ ವೇಣುಗೋಪಾಲ ಸೊರಬರು ,ಇತರ ಕನ್ನಡ ಅಧ್ಯಾಪಕರುಗಳು, ಎಲ್ಲೇಗೌಡ ಬೆಸಗರಹಳ್ಳಿ ಅವರ ಮತ್ತು ಕುಟುಂಬದ ಆತ್ಮೀಯ ಮಿತ್ರರಾಗಿದ್ದ ಪ್ರಸಿದ್ಧ ಕವಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಪ್ರೋತ್ಸಾಹ ,ಮಾರ್ಗರ್ಶನದಿಂದ ಪಿಯುಸಿಯಿಂದಲೇ ಅಂದರೆ ಹದಿನೆಂಟನೇ ವಯಸ್ಸಿನಿಂದ ಕಾವ್ಯ ರಚನೆ ಆರಂಭವಾಗಿ ಅಂತರಕಾಲೇಜು ಕವಿಗೋಷ್ಟಿಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದಾಗಿ ಮುಂದೆ ಕ್ರೈಸ್ಟ್ ಕಾಲೇಜಿನ ಚಿ.ಶ್ರೀನಿವಾಸರಾಜು ಅವರಿಂದ ಗುರುತಿಸಲ್ಪಟ್ಟು ಬೆಳಕಿಗೆ ಬಂದ ಅನೇಕ ಪ್ರಮುಖ ಕವಿಗಳಲ್ಲಿ ಇವರೂ ಸಹಾ ಒಬ್ಬರು. ...

READ MORE

Related Books