ಲೇಖಕ, ಕವಿ, ವಿಮರ್ಶಕರಾದ ಕೆ. ವಿ ತಿರುಮಲೇಶ್ ಅವರ ಕೃತಿ ’ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ ಒಂದು ಬಗೆಯ ಲಘು ಭಾವಗೀತೆಗಳಿರುವ ಮಿಶ್ರ ಕವಿತೆಗಳ ಸಂಕಲನವಾಗಿದೆ.
ಆಡು ಕನ್ನಡ, ಅಮ್ಮ ನಿಮ್ಮ ಮನೆಗಳಲ್ಲಿ, ಕಲಿಸು ನನಗೆ ಕಲಿಸು, ಈ ಗತಿಶೀಲ ಜಗದಲ್ಲಿ, ದೇಶವೆಂದರೆ, ದೇವರ ಕಾಣಲು, ಎಲ್ಲಾದರೂ ಒಂದು ದಿನ, ಯಾರಿವನೋ, ಯಕ್ಷಲೋಕ, ನಿನ್ನ ಹೆಸರು, ಕಾಣದ ಕೈಯೆಂದು, ಮಂಜಿಗೆ ನೆನೆಯದ, ಮೂರ್ಖ ನಾನು, ನಾನೆ ದೇವರೋ, ನಮ್ಮೂರ ಚಂದ್ರನ, ಪ್ರೀತಿ ನನಗೆ, ಸೂರ್ಯ ಅಪೂರ್ಣ, ಯಃ ಪಶ್ಯತಿ, ಸ ಪಶ್ಯತಿ, ಆಡಿಸು ನನ್ನ ಜಾಡಿಸು ನನ್ನ, ಆರುಣಿಯ ನೋಡಿದಿರಾ, ಅದು ಸಮಯ, ಅಪರಿಮಿತ ತಾರೆಗಳು, ಬೆಚ್ಚಿಸುವುದೇತಕೆ, ಬೆರಳ ಕೇಳಿದರೆ ಕೈಯ ಕೊಡುವವನು, ಬೆಟ್ಟಕ್ಕೆ ಮಣ್ಣೊತ್ತವು, ಮುಖವ ಕನ್ನಡಿಯಲ್ಲಿ, ಎತ್ತು ಕಟ್ಟಿದೆ, ಗಿರಿಯೊಳಗೆ ನೀನೆ, ನಮ್ಮ ಕೇರಿಯ ಚಂದ, ಅರ್ಧಕೆ ನಿಂತ ಹಾಡುಗಳೇ, ತಾರನೆ ಶ್ರೀರಾಮ, ತೇಲುತಿರುವ ಮುಗಿಲುಗಳಿಗೆ, ಅಲ್ಲಲ್ಲಿ ನಿಂತು, ಅತ್ತಿತ್ತ ನೋಡದೆ, ಈಚಲ ಮರದಡಿ, ಹಾಲಿಂದ ಮಾಡಿದರೊ, ಏನ ಬಯಸುವೆ ನೀನು, ಮಾನ್ಯರಿಗೆ ಶರಣು, ಎಷ್ಟೊ ಕವಿಗಳು ಆಗಿಹೋದರೂ, ಬೆಳಕ ನೀ ನೋಡಬೇಕೆ ಇನ್ನೂ ಹಲವಾರು ಕವಿತೆಗಳ ಗುಚ್ಛ ’ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೆ’ ಕೃತಿಯಲ್ಲಿದೆ.
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...
READ MORE