ಮುದಲ್ ವಿಜಯ್ ಅವರು ರಚಿಸಿರುವ ಕವನ ಸಂಕಲನ ’ಕಡಲಿನಾಳದ ಕವನ’ ಯಾವುದೇ ಚೌಕಟ್ಟುಗಳನ್ನು, ಪದ್ಧತಿಗಳನ್ನು, ಗುಣಿತಗಳನ್ನು ಮೀರಿ ಆಳಕ್ಕೂ ಇಳಿಯುವ, ಎತ್ತರಕ್ಕೂ ಏರುವ ಶಕ್ತಿ ಕಾವ್ಯಕ್ಕಿದೆ ಎಂಬ ಆಶಯ ತಳೆದಿದೆ. ಯಾವ ಕಾವ್ಯಾಸಕ್ತರೂ ಅಲ್ಲಗಳೆಯಲಾದ, ಹಾಗೆಯೇ ರೂಪಕ, ಉಪಮೆಗಳಾದಿಯಾಗಿ ಅಲಂಕರಿಸಿಕೊಳ್ಳದಿದ್ದರೂ ಕಾವ್ಯವು ತನ್ನ ನಿರಾಡಂಬರ ಸೌಂದರ್ಯದಲ್ಲೂ ರಸಿಕ ಹೃದಯವನ್ನು ಬೆಚ್ಚಗಾಗಿಸಬಹುದು, ಮುಸುಕಿನೊಳಗಿರುವ ಮನವ ಬೆಚ್ಚಿಸಬಹುದು, ಜೋಂಪು ಹತ್ತಿರುವ ಪ್ರಜ್ಞೆಯ ಎಚ್ಚರಿಸಬಹುದು, ನಿರಪೇಕ್ಷೆಯಿಂದ ದೃಷ್ಟಿಸುವರ ಮೆಚ್ಚಿಸಬಹುದೆಂಬ ಕಾವ್ಯದ ಧ್ವನಿಯನ್ನು ಇದು ತಿಳಿಸುತ್ತದೆ.
ಇದು ನೇರ ಮತ್ತು ಸರಳತೆಯ ಕಸುವು ಕೂಡ ಹೌದು, ಕಂಡುಕೊಳ್ಳಲಾಗುವಂತಹ ಆಳ, ಎತ್ತರ, ಸಮತಟ್ಟುಗಳನ್ನು ಆಳದ ಕಡಲಿನ ಅಳಲನ್ನು ತೋಡಿಕೊಳ್ಳುತ್ತಿರುವ ಮುದಲ್ ವಿಜಯ್‌ರವರ ರಚನೆಗಳಲ್ಲಿದೆ.
ಕಾವ್ಯ ರಚನೆ ಸುಲಭವಲ್ಲ ಎಂದು ವಿಜಯ್ ತೊದಲ್ನುಡಿದರೂ ಕಾವ್ಯವನ್ನು ರಚಿಸಬೇಕಾಗಿಲ್ಲ, ಅವು ರಚಿತವಾಗುತ್ತವೆ ಎಂಬ ಅಂಶ ಅವರ ಅನೇಕ ಕವನಗಳಲ್ಲಿ ಕಂಡು ಬರುತ್ತದೆ.
ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. ...
READ MORE