ಬೆಂಕಿ ಸುಡುವ ಜಲ ಇದು ಕವಿ ಕುಮಾರ ಇಂದ್ರಬೆಟ್ಟ ಅವರು ಕವನ ಸಂಕಲನ. “The last supper' ಏಸುವಿನ ಬದುಕಿನಲ್ಲಿ ಒಂದ ನಿರ್ಣಾಯಕವಾದ ಘಟ್ಟ. ತನ್ನ ಶಿಷ್ಯನೊಬ್ಬನಿಂದಲೇ ತನ್ನ ಅವಸಾನವನ್ನು ಕಂಡುಕೊಂಡ. ಅವನು ತನ್ನ ಮೈಯನ್ನು ರೂಟ್ಟಿಯೆಂದು ಭಾವಿಸುತ್ತಾನೆ ಹಾಗೂ ರಕ್ತವನ್ನು ದ್ರಾಕ್ಷಾರಸವನ್ನಾಗಿಸಿ ರೂಪಕವಾದ ಭಾಷೆಯಲ್ಲಿ ಮಾತನಾಡುತ್ತಾನೆ. ಆದರೂ 'ಪುನರುತ್ಥಾನ'ದ ಪರಿಕಲ್ಪನೆಯಂತೆ ಗುಲಾಮರಂತಿರುವ ಯಹೂದಿಗಳ ಉದ್ದರಿಸಲೆಂದು ಮತ್ತೆ ಹುಟ್ಟಿಬರುವ ಅಭಯ ನೀಡುತ್ತಾನೆ. ಈ ಕಾವ್ಯದಲ್ಲಿ ದಿನನಿತ್ಯ ಅಕಾರಣವಾಗಿ ಶಿಕ್ಷಿಸಲ್ಪಡುವ ಹಲವು 'ಏಸುಗಳ ಬಗ್ಗೆ ಕವಿ ಮಾತನಾಡುತ್ತಾನೆ. ಈ ಕ್ರೌರ್ಯ ಹಿಂಸೆಗೊಳಗಾದ ಜೀವ ಮತ್ತೆ ಮತ್ತೆ ಹುಟ್ಟಿ ಬರುವ ಆಸೆಯನ್ನು ಜೋಡುಗಳ ತಕ್ಕೊಂಡು ಮಂಟೇದಯ್ಯನ ಜೋಳಿಗೆಯಿಂದ ಮರುಜೀವ ಪಡೆಯುವ ಕನಸನ್ನು ಈ ಕವನಗಳು ದಲಿತನೊಬ್ಬನ 'ಮಹಾಯಾನ'ವೆಂಬಂತೆ ಚಿತ್ರಿಸುತ್ತವೆ.
ಯುವಕವಿ ಕುಮಾರ ಇಂದ್ರಬೆಟ್ಟ ಅವರು 1987 ಜುಲೈ 16ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ ‘ನಿನಗೂ ಕೂಡ ಕಳಂಕವೆ’. ಅವರ ಮತ್ತೊಂದು ಕವನ ಸಂಕಲನ ‘ಬೆಂಕಿ ಸುಡುವ ಜಲ’ 2017ರಲ್ಲಿ ಪ್ರಕಟವಾಗಿದೆ. ...
READ MORE