ಅಪ್ಪನ ಪಟಗದ ನೆರಳು

Author : ವೀರೇಶ ಜಿ. ಮೇಟಿ

Pages 80

₹ 100.00




Year of Publication: 2021
Published by: ಜಯದೀಪ ಪ್ರಕಾಶನ
Address: ಸದಾಶಿವ ನಗರ, ಗದಗ ರೋಡ್, ಕೊಪ್ಪಳ-583231.
Phone: 8861611314

Synopsys

ಕವಿ ವೀರೇಶ ಜಿ. ಮೇಟಿ ಅವರ ’ಅಪ್ಪನ ಪಟಗದ ನೆರಳು’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದ ಜಾಜಿ ದೇವೇಂದ್ರಪ್ಪ ಅವರು, ಸಮಾಜದ ವಿಭಿನ್ನ ಆಯಾಮಗಳ ಸಣ್ಣ ಸಣ್ಣ ಘಟಕಗಳು ಕಾವ್ಯರೂಪ ಪಡೆದಿದೆ. ವೀರೇಶ ಅವರು ತಾನುಂಡ ತಲ್ಲಣಗಳನ್ನು ಹಾಗೆ ಇಟ್ಟುಕೊಳ್ಳಲಾರ, ತಾಳಲಾರ, ಹಾಗಾದುದ್ದರಿಂದಲೇ, ಅವು ಅಕ್ಷರ ವಿನ್ಯಾಸಗಳಾಗಿ ಕವಿತೆಗಳಾಗಿವೆ. ಕಾವ್ಯದ ಕುಲುಮೆಯ ಮುಂದೆ ಕುಂತು ಕಮಾರನಂತೆ ಕಬ್ಬಿಣವನ್ನು ಬಡಿದು ಆಕಾರ ಮಾಡುವ ಉಮೇದಿಯಾದರೂ ಆ ದಿಸೆಯಲ್ಲಿ ತಿದಿಯೂದಿ, ಕಬ್ಬಿಣದ ಕಾವನ್ನು ಪರೀಕ್ಷಿಸಿ ಸುತ್ತಿಗೆಯ ಪೆಟ್ಟುಕೊಡುವ ಕಲಾವಂತಿಕೆಯ ಕಡೆ ದಿಟ್ಟತನ ತೋರುವ ಹಾದಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಂಕಲನದ ಕೆಲ ಪದಗಳನ್ನು ಓದುವ ಅವಲೋಕಿಸುವ ಸಂದರ್ಭದಲ್ಲಿ ನಾನು ಕನ್ನಡ ವಿಮರ್ಶೆಯ ಯಾವ ಸೈದ್ಧಾಂತಿಕ ವಿಧಿವಿಧಾನದ ಅಳತೆ ಪಟ್ಟಿಯನ್ನಿಡಲಾರೆ, ನನ್ನ ಸರಳ ಗ್ರಹಿಕೆಯ ನೆಲೆಯಲ್ಲಿ ವೀರೇಶ ಮೇಟಿಯವರ ಕಾವ್ಯವನ್ನು ನೋಡ ಬಯಸುವ ನಂಬಿಕೆ ಜೀವನ ಬಂಡಿಯ ಕಡೆಗೀಲು, ಮನುಷ್ಯ ಸಂಸ್ಕೃತಿ ಈ ಆಧಾರದಲ್ಲಿಯೇ ಸಾಗಿದೆ. ಕವಿ ವೀರೇಶ ಮೇಟಿಯವರು ತಮ್ಮ ಅಂತರಂಗದೊಳಗೆ ಅಪ್ಪನೆಂಬ ಅವ್ಯಾಹತ ನದಿಯ ಕುರಿತು ಬರೆದ ಕವಿತೆ ತುಂಬ ಗಮನ ಸೆಳೆಯುತ್ತದೆ. ಬಹುತೇಕ ತಾಯಿಯನ್ನೇ ಆವಾಹಿಸಿಕೊಂಡ ಕವಿಗಳು ಅದೆಷ್ಟೋ ಕಾವ್ಯ ರಚಿಸಿದ್ದಾರೆ. ಅಪ್ಪನ ಕುರಿತು ಅಷ್ಟಾಗಿ ಬಂದಿಲ್ಲ. ಅಪ್ಪ ಮೇಲ್ನೋಟಕ್ಕೆ ನಿರ್ದಯಿ ಎನಿಸಿದರೂ ಅವನ ಹೃದಯದೊಳಗೆ ಇಡೀ ಕುಟುಂಬ ಕಾಪಿಟ್ಟುಕೊಂಡ ಬಗೆ ವಿಭಿನ್ನವಾದದ್ದು. ‘ಅಪ್ಪನ ಪಟಗದ ನೆರಳು’ ಕವಿತೆಯಲ್ಲಿ ಅಂಥಾ ಒಂದು ಸುಂದರ ಚಿತ್ರಣ ನೀಡಿದ್ದಾರೆ. ಇಡೀ ಮನುಕುಲದ ಬದುಕಿಗೆ ಅಪ್ಪ ನೆರಳಾದ ಕಾಲವೊಂದಿತ್ತು ಅನ್ನುವುದನ್ನು ಇಲ್ಲಿ ವಿವರಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವೀರೇಶ ಜಿ. ಮೇಟಿ

ಲೇಖಕ ವೀರೇಶ ಜಿ. ಮೇಟಿ ಅವರು ಮೂಲತಃ ಬಾಗಲಕೋಟೆಯ ಹುನಗುಂದ ತಾಲೂಕಿನ ನಾಗೂರ ಗ್ರಾಮದವರು. ಎಂ.ಎ, ಬಿ.ಇಡಿ ಪದವೀಧರರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಳದಳ್ಳಿಯಲ್ಲಿ ಸಹ ಶಿಕ್ಷಕರು. ಕೊಪ್ಪಳ ಜಿಲ್ಲೆಯ ಆಂಗ್ಲ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಆಟಗಾರರೂ ಹೌದು.  ಬೆಂಗಳೂರು, ದೆಹಲಿ, ಅಸ್ಸಾಂಗಳಲ್ಲಿ ವಿವಿಧ ತರಬೇತಿಗಳಲ್ಲಿ ಕೊಪ್ಪಳವನ್ನು ಪ್ರತಿನಿಧಿಸಿದ್ದಾರೆ. ಕೃತಿಗಳು: ಅಪ್ಪನ ಪಟಗದ ನೆರಳು (ಕವನ ಸಂಕಲನ) ...

READ MORE

Related Books