‘ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ 10 ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ಧ್ಯಾನಕ್ಕೆ ಕೂತ ನದಿ ಶೀರ್ಷಿಕೆಯ ಕತೆಯು ಭಿನ್ನವಾಗಿದ್ದು, ವಸ್ತು ವೈವಿಧ್ಯ, ಜಾಳಾಗದೇ ಇರುವ ನಿರೂಪಣೆ, ಭಾಷೆಯ ಬಳಕೆಯಲ್ಲಿ ತೋರಿದ ಕಾಳಜಿ, ಹೇಳಲು ಬಯಸಿದ ತಂತ್ರಗಳ ಜೊತೆಗೆ ಪ್ರಜ್ಞಾಪೂರ್ವಕವಾಗಿ ಸೇರಿಸಿರದ ಹಾಗೆ ಕಾಣುವ ರೂಪಕಗಳ ಸೃಷ್ಟಿ ವಿಶೇಷ ಗಮನ ಸೆಳೆಯುತ್ತದೆ. ಮನರಂಜನೆಯ ಜೊತೆಗೆ ಬುದ್ದಿಗೂ ಕೆಲಸ ಕೊಟ್ಟು, ಭಾವನಾತ್ಮಕ ಹಾಗೂ ಕಲಾತ್ಮಕ ಅಂಶಗಳ ಮೂಲಕ ಗಮನ ಸೆಳೆದು ಉಳಿದೆಲ್ಲ ಕತೆಗಳಿಂತ ಭಿನ್ನವಾಗಿ ನಿಲುತ್ತದೆ. ಇಲ್ಲಿನ ಕತೆಗಳು: ಹರಿದ ಕುಪ್ಪಸದ ಬೆಳಕು, ಧ್ಯಾನಕ್ಕೆ ಕೂತ ನದಿ, ಮರಣಕೆ ತೊಡಿಸಿದ ಅಂಗಿ, ಸಂಕನ ಪೂಜೆ, ಅರ್ಧ ನೇಯ್ದಿಟ್ಟ ಸ್ವೆಟರ್, ಹತ್ತಿರವಿದ್ದೂ ದೂರನಿಂತು, ಹಲಗೆಯ ಸದ್ದು, ಪಲ್ ಪಲ್ ದಿಲ್ ಕೆ. ಪಾಸ್, ದೇವರ ಮುಖದ ಕಲೆ, ಚೆಕ್ ಔಟ್
ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ. ಬರೆದ ಯಾವುದೊ ಒಂದು ಸಾಲು ಓದುವ ಯಾರದೊ ಎದೆಯೊಳಗೆ ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ. ಕಥೆ ಇವರ ಇಷ್ಟದ ...
READ MORE