ಮುಕ್ತಛಂದದ 50 ಕವಿತೆಗಳುಳ್ಳ ಈ ಕೃತಿಯಲ್ಲಿ ಸಾಮಾಜಿಕ ಕಾಳಜಿ, ಮಾನವೀಯ ಸಂಬಂಧಗಳು, ವ್ಯವಸ್ಥೆಯ ಅವಘಡಗಳು, ನೈತಿಕ ಗಡಿದಾಟದ ಪ್ರೇಮ, ಸಮಾನತೆ, ಸೌಹಾರ್ದದ ತುಡಿತ, ನವಿರಾದ ಪ್ರೇಮ, ವಿರಹ ವೇದನೆ, ರೈತರ ಆತ್ಮಹತ್ಯೆ, ಸೈನಿಕರ ದೇಶಪ್ರೇಮ, ಅನಾಥ ಮಕ್ಕಳ ಸ್ಥಿತಿ, ಧಾರ್ಮಿಕ ವ್ಯವಸ್ಥೆಯ ಪರಿಣಾಮ, ಚುನಾವಣಾ ರಾಜಕೀಯದ ವೈಪರಿತ್ಯ, ನಿಸರ್ಗ ಪ್ರೀತಿ, ಕನ್ನಡ ನಾಡುನುಡಿಯ ಅಭಿಮಾನ ಸೇರಿದಂತೆ ಹಲವಾರು ವಿಷಯಗಳ ಕುರಿತಾದ ಕಾವ್ಯ ಇಲ್ಲಿ ಅನಾವರಣಗೊಂಡಿದೆ. ಈ ಕೃತಿಯಲ್ಲಿ ನಾಲ್ಕೈದು ಗಜ಼ಲ್‌ಗಳೂ ಇವೆ. ಇಲ್ಲಿನ ಹೆಚ್ಚಿನ ಕವಿತೆಗಳು ಪ್ರೀತಿ ಪ್ರೇಮದ ಕುರಿತಾಗಿವೆ. ಇವು ಸ್ವಾನುಭವನದ ರೀತಿಯಲ್ಲಿ ಸಾಗುತ್ತ ಸಾರ್ವತ್ರಿಕ ಅನುಭವದ ರೂಪ ಪಡೆಯುತ್ತವೆ. ನವಿರುಭಾವನೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟಿರುವುದರ ಜೊತೆಗೆ ಎಲ್ಲಿಯೂ ಗಡಿಮೀರದೆ ಒಲವಧಾರೆ ಇಲ್ಲಿ ಹರಿಯುತ್ತಿರುವಂತೆ ತೋರುತ್ತದೆ. ಕನ್ನಡ ಪುಕ್ತಕ ಪ್ರಾಧಿಕಾರವು ಯುವಲೇಖಕರ ಚೊಚ್ಚಲ ಕೃತಿ ಪ್ರಕಟಿಸಲು ಸಹಾಯಧನ ನೀಡುವ ಯೋಜನೆಯಲ್ಲಿ ಆಯ್ಕೆಯಾದ ಕೃತಿಯಿದು. ಕಲಬುರಗಿ ಭಾಗದ ಪ್ರಸಿದ್ಧ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆಯವರ ಮುನ್ನುಡಿ ಇದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಲಿಗಾಡೆ ಕಾವ್ಯಪ್ರಶಸ್ತಿ 2011
ಕ.ಪು.ಪ್ರಾ. ಸಹಾಯಧನ ಪಡೆದ ಕೃತಿ,
ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ 2011