ಮುಗಿಲ ಮಲ್ಲಿಗೆ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 80

₹ 80.00




Year of Publication: 1961
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರು 1961ರ ಆಗಸ್ಟ 15 ರಂದು ಪ್ರಕಟಿಸಿದ ಸಂಕಲನ ಮುಗಿಲ ಮಲ್ಲಿಗೆ. ಮಹರ್ಷಿ ಅರವಿಂದ ಘೋಷರ ಜನ್ಮ ದಿನದಿಂದೆ ಪ್ರಕಟವಾದ ಈ ಸಂಕಲನದಲ್ಲಿ 38 ಕವಿತೆಗಳಿವೆ. ಗುರುದೇವ ರವೀಂದ್ರ ನಾಥ ಟ್ಯಾಗೊರರನ್ನು ಕುರಿತ 5 ಕವಿತೆಗಳು ಹಾಗೂ 5 ರವೀಂದ್ರರ ಕವಿತೆಯ ಅನುವಾದಗಳು ಈ ಸಂಕಲನದಲ್ಲಿವೆ. ವಿಶ್ವಮಾನವರಾ ಕವಿತೆಯಲ್ಲಿ ಭಾರತ ಗುರುವೇ ಸೌಂದರ್ಯ ತರುವೆ ನಿನಗೊಪ್ಪಿಸಿದೆ ದೂಪ. ಮೊಸಿದ ಕಡೆಗೆ ವಾಸನೆ ಇಡುಗೆ , ದೃಷ್ಟಿಯೇ ದೇಪವೂ ಪ್ರಕಟ ಸ್ವರೂಪವು ನಿನ್ನೆನಪು ನಿನ್ನೆತ್ತರ ಎನ್ನುವ ಬೇಂದ್ರೆಯವರು ಓಂ ನಮೋ ಸತ್ಯ ಎನ್ನುವ ಸಂಕಲನದಲ್ಲಿ ಅಂಬಿಕಾತನಯವೂ ವರಗದ ಮಾಕವಿಗೆ ಇಲ್ಲಿತ್ತು ಋಣಬಂಧವೋ ಎನ್ನುತ್ತಾರೆ. ಕವಿತುಂಬಿ ರವಿತುಂಬಿ ಎಂಬ ಮತ್ತೊಂದು ಕವಿತೆಯಲ್ಲಿ ಕವಿ ತತ್ತತ್ತ ತತ್ತರಿಸಿದಾ ರವಿ ಮೌನದಿ ಉತ್ತರಿಸಿದಾ ದತ್ತಾ ಗುಪಾದಕ್ಕೆ ಛತ್ತರಿಸಿದಾ ನುಡಿಯ ಕೊಡಿಗಿ. ಎನ್ನು ಬೇಂದ್ರೆ ಅಭಂಗ ಕವಿಯಲ್ಲಿ ವಂಗವನ ಭಂಗಗೊಳಿಸಿದ ಕವಿಯೇ ಬೆಳೆಸಯ್ಯ ಕಂಡ ಭಾರತವ. ಮಹಾರಾಷ್ಟ್ರದ ಕವಿ ಶ್ರೀ ಬೋರಕರ ಅವರು ರಚಿಸಿದ ರವೀಂದ್ರ ಕವಿತೆಯ ಕನ್ನಡ ಅನುವಾದವನ್ನು ಬೇಂದ್ರೆಯವರು ವಸಂತ ಪಲ್ಲವಿಯಾಗಿಸಿದ್ದಾರೆ. ಪಡುವಲಕಡಲೆಡೆ ರವಿಮೂಡಿದನು, ಎಂಬ ಕವಿತೆ ವಾಸ್ತವವಾಗಿ ಅದೊಂದು ರೂಪಕ. ರವೀಂದ್ರನಾಥ ಟ್ಯಾಗೊರ ೧೮೮೩ರಲ್ಲಿ ತಮ್ಮ ಅಣ್ಣ ದತ್ತೇಂದ್ರ ನಾಥರ ಕಾರಣದಿಂದಾಗಿ ಕಾರವಾರಕ್ಕೆ ಬಂದಿದ್ದರು. ಪ್ರಕೃತೀರ ಪ್ರತಿಶೋಧ ಎಂಬ ಅವರ ನಾಟಕ ರಚನೆಗೆ ಕಾರವಾರವೇ ಪ್ರೇರಣೆ. ರವೀಂದ್ರರು ಕಾರವಾರದಲ್ಲಿ ಇದ್ದ ಸಂದರ್ಭವನ್ನು ಮತ್ತು ನಡೆದ ಘಟನೆಯನ್ನು ಆಧರಿಸಿ ಬರೆದ ಕಲ್ಪನಾ ರೂಪಕ ಚಿತ್ರ ಇದು. ನಾಟಕೀಯ ರೂಪದಲ್ಲಿ ಬೆಳೆಯುತ್ತ ಹೋಗುತ್ತದೆ. ದ್ವೈತ ಭಾವವನ್ನು ಉನ್ನತ ಸತ್ಯದತ್ತ ಕರೆದೊಯ್ಯುವ ಕವಿತೆ ಮುಗಿಲಮಲ್ಲಿಗೆ. ಗಣಪತಿ ಸ್ತುತಿ, ಮಹಾಲಕ್ಷ್ಮಿ ಶರಣು, ರಿತಿಯ ಪ್ರಾರ್ಥನೆಗಳು ಇವೆ. ಶ್ರೀ ಅರವಿಂದರು ರಚಿಸಿದ ಸಾನೆಟ್ ನ ಅನುವಾದವೇ ಮಹಾಲಕ್ಷ್ಮಿ. ಈ ಸಂಕಲನವನ್ನು ಬೇಂದ್ರೆಯವರು ಗುರುವರ ರವೀಂದ್ರರ ಸದೋದಿತ ದರ್ಶನಕ್ಕೆ ಅರ್ಪಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books