ಕನ್ನಡ ನಾಡಿನ, ಭಾಷೆಯ ಹಿರಿಮೆ - ಗರಿಮೆ - ವೈಭವವನ್ನು ತಮ್ಮ ಕವನಗಳ ಮೂಲಕ ಸಾರಿದವರು ಕವಿ ನಿಸಾರ್ ಅಹಮದ್. ನಿತ್ಯೋತ್ಸವ-ಕವನ ಸಂಕಲನ. ಈ ಪೈಕಿ ನಿತ್ಯೋತ್ಸವ ಪ್ರಮುಖ ಕವಿತೆ. ಜನಮಾನಸದಲ್ಲಿ ಇಂದಿಗೂ ನೆಲೆ ನಿಂತಿರುವ ಈ ಹಾಡಿನ ಶೀರ್ಷಿಕೆಯ ಸಂಕಲನದಲ್ಲಿ ಭಾವ ಗೀತೆಗಳಿವೆ. ಹಲವಾರು ಕವಿತೆಗಳು ಧ್ವನಿ ಸುರಳಿಯಲ್ಲಿ ಪ್ರಕಟವಾಗಿದ್ದು ಈ ’ನಿತ್ಯೋತ್ಸವ’ ಸಂಕಲನ 25ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದ್ದು, ಕೃತಿಯ ಘನತೆಗೆ ಸಾಕ್ಷಿ.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE