‘ಜಲಪಾತ’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು, `ಇಲ್ಲಿ ಸೃಜನಶೀಲತೆಯ ನೀರ್‍ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ, ಬರಹ ಇದೆ! ತನಿ ನುಡಿ , ತನಿ ಅರ್ಥ, ತಳಿತನಿ ಕವಿತೆಯ ಜೀವ ಕವಿತೆಯ ಜೀವ ಜಲ ಇದೆ. ‘ನನ್ನ ಮನವೊಂದು ಹಕ್ಕಿ; ಕವಿತಾ ರಾಜಕುಮಾರಿ ಹೊರಟಿದ್ದಾಳೆ ರೆಕ್ಕೆ ಪುಕ್ಕ ಕಟ್ಟಿ ಸೂರ್ಯ ಚಂದ್ರ ದಾರಿಯಲ್ಲಿ.. ನಕ್ಷತ್ರ ಹೆಕ್ಕಿ!’ ಕವಯತ್ರಿಯ ಕಾವ್ಯದ ಮೌಲ್ಯಮಾಪನಕ್ಕೆ ಇಷ್ಟು ಸಾಲುಗಳು ಸಾಕು. ಇಲ್ಲಿ ಅನುಭವ ಇದೆ; ಕಲ್ಪನೆ ಇದೆ; ಶೈಲಿಯಲ್ಲಿ ಆಂತರಿಕ ಛಂದ ಇದೆ; ಬಂಧ ಇದೆ. ಇಂಥ ಕಾವ್ಯಾತ್ಮಕ ಸಾಲುಗಳು ‘ಜಲಪಾತ; ದಲ್ಲಿ ಹಲವು- ಹನ್ನೊಂದಿದೆ! ಅದೇ ಯಶಸ್ಸು! ಸಮೃದ್ಧ ಬರಹದ ಕಾಣಿಕೆ ನೀಡಿದ್ದಾರೆ ಈ ಸಾರಿ. ಅನುಭವ ಮಾಗಿದಾಗ ಮಾತು ತೂಗುತ್ತದೆ ವಾಗಾರ್ಥದಿಂದ ಬಾಗುತ್ತದೆ; ಧ್ವನಿಯಿಂದ ಬೀಗುತ್ತದೆ ’ ಎಂದು ಪ್ರಶಂಸಿಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE