'ಗಾಯಗೊಂಡ ಸಾಲುಗಳು' ಶಿವಾನಂದ ಸೊರಟೂರು ಅವರ ಕವನ ಸಂಕಲನ. ಕವಿತೆಗೆ ಎದೆಯ ಮಾತು ಕೇಳಿಸುತ್ತದೆ. ಅದು ಮನದೊಳಗೆ ಬಚ್ಚಿಟ್ಟು ಮನಸ್ಸು ಮೌನವಾಗಿ, ಮೌನ ಅಕ್ಷರವಾಗಿ ಹೇಳಬೇಕಾದ್ದನ್ನು ಹೃದಯ ಮತ್ತು ಮನಸ್ಸಿಗೆ ತಾಕುವಂತೆ ಸುಲಲಿತವಾಗಿ ಬಂಡೆಯ ಮೇಲೆ ಹರಿದ ನೀರಿನಂತೆಯೊ ಜಲಲ ಜಲಧಾರೆಯಾಗಿಯೋ ಇನಿದನಿಯ ನುಡಿಗಳನ್ನು ಇನ್ನೊಬ್ಬರಿಗೆ ಮುಟ್ಟಿಸಿದಾಗ ಕವಿತೆಗೊಂದು ನಿಟ್ಟುಸಿರು ಸದ್ಯ ದಡ ಸಿಕ್ಕಿತಲ್ಲಾ ಎಂಬ ಸಮಾಧಾನ. ಕವಿತೆ ಕ್ರಾಂತಿಯು ಆಗಬಲ್ಲದು ಶಾಂತಿಯು ಆಗಬಲ್ಲದು. ಗಾಯಗೊಂಡ ಎದೆಗೆ ಮುಲಾಮು ಆಗಬಲ್ಲದು. ಕವಿತೆ ಹೇಳುತ್ತಲೆ ಹಗುರಾಗುವುದಿದೆಯಲ್ಲ ಅದೊಂತರ ಖುಷಿ ಬರೆದವರಿಗಾದರೆ ಓದಿದವನ ಹೃದಯದಲ್ಲೊಂದು ಒಳಪು ತನ್ನಿಂದ ತಾನೆ ಹುಟ್ಟಿ ಬಿಡುತ್ತದೆ. ಆಡಿದ ಮಾತು ಸುಳ್ಳಿರಬಹುದು. ಬರೆದ ಕವಿತೆ ಸತ್ಯ ಆಗಾಗಿ ಕವಿ ಸತ್ತಮೇಲೂ ಕವಿತೆ ಜೀವಂತವಾಗಿರುತ್ತದೆ. ಅದು ಕವಿತೆಯ ಸತ್ಯದ ದರ್ಶನ ಎನ್ನುತ್ತಾರೆ ಮಾರುತಿ ಗೋಪಿಕುಂಟೆ
ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ. ಬರೆದ ಯಾವುದೊ ಒಂದು ಸಾಲು ಓದುವ ಯಾರದೊ ಎದೆಯೊಳಗೆ ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ. ಕಥೆ ಇವರ ಇಷ್ಟದ ...
READ MORE