ಗೊಂಚಲು

Author : ಸುನೀತಿ ಉದ್ಯಾವರ

Pages 72

₹ 40.00




Year of Publication: 2003
Published by: ಪ್ರಶಾಂತ ಪ್ರಕಾಶನ
Address: ರಾಯಚೂರು

Synopsys

‘ಗೊಂಚಲು’ ಸುನೀತಿ ಉದ್ಯಾವರ ಅವರ ಕವನ ಸಂಕಲನವಾಗಿದೆ. ರಾಷ್ಟ್ರಪ್ರೇಮವೇ ಇರಲಿ, ವ್ಯಕ್ತಿ ಪರಿಚಯವಾಗಲಿ ಅಥವಾ ನಿಸರ್ಗದ ಒಂದು ಘಟನೆ - ಸೌಂದರ್ಯ ಯಾವುದೇ ಇರಲಿ ಅವೆಲ್ಲ ಹಾಡುಗಳಾಗಿ ಇಲ್ಲಿ ಸಂಕಲನಗೊಂಡಿವೆ. ಇತ್ತೀಚಿನ ಕವನಗಳಾದರೂ ನವೋದಯದ ಪ್ರಾಸಬದ್ಧ ಶೈಲಿಯನ್ನೇ ಉಳಿಸಿಕೊಂಡು ಅರ್ಥವಂತಿಕೆಯನ್ನೂ ಮೆರೆದಿವೆ.

About the Author

ಸುನೀತಿ ಉದ್ಯಾವರ
(11 July 1937)

ಕಾದಂಬರಿಗಾರ್ತಿ, ಕವಯಿತ್ರಿ ಸುನೀತಿ ಉದ್ಯಾವರ ಪಿಎಚ್.ಡಿ. ನಿವೃತ್ತ ಅಧ್ಯಾಪಕರು. ಅವರು 1937 ಜುಲೈ 11 ಮಂಗಳೂರಿನಲ್ಲಿ ಜನಿಸಿದರು. ತಂದೆ ಶಾಂತಾರಾಮರಾವ್, ತಾಯಿ ಸೀತಾಬಾಯಿ. ಹುಟ್ಟೂರಿನಲ್ಲೇ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ ಅವರು ನಂತರ ಮುಂಬಯಿಯ ಖಾಲ್ಸಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.  ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿದರು. ನಂತರ ಮುಂಬಯಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ-ವಡಾಲಾದಲ್ಲಿ ಶಿಕ್ಷಕಿಯಾಗಿ 34ವರ್ಷಗಳ ಕಾರ್ಯ ನಿರ್ವಹಿಸಿದ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ “ಕಡೆಂಗೋಡ್ಲು ಶಂಕರಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಾತ್ರವಲ್ಲ ಅದೇ ವಿಶ್ವವಿದ್ಯಾಲಯದಲ್ಲಿ ಸುವರ್ಣ ಪದಕದೊಂದಿಗೆ ಕನ್ನಡ ಎಂ.ಎ. ಗಳಿಸಿದ ಹಾಗೂ ಡಾಕ್ಟರೇಟ್ ಪಡೆದ ...

READ MORE

Reviews

ಹೊಸತು- 2004- ಜನವರಿ

ಇಲ್ಲಿನ ಕವಿತೆಗಳುಸುನೀತಿಯವರ ಬಹುಮುಖ ಆಸಕ್ತಿಗಳನ್ನು ಬಿ೦ಬಿಸುತ್ತವೆ. ಎಲ್ಲ ದಿಕ್ಕುಗಳಲ್ಲೂ ಯೋಚಿಸುವ ಅವರ ಮನಸ್ಸಿನ ವಿವಿಧ ಭಾವನೆಗಳು ಇಲ್ಲಿ ವ್ಯಕ್ತವಾಗಿವೆ. ರಾಷ್ಟ್ರಪ್ರೇಮವೇ ಇರಲಿ, ವ್ಯಕ್ತಿ ಪರಿಚಯ ವಾಗಲಿ ಅಥವಾ ನಿಸರ್ಗದ ಒಂದು ಘಟನೆ-ಸೌಂದರ್ಯ ಯಾವುದೇ ಇರಲಿ ಅವೆಲ್ಲ ಹಾಡುಗಳಾಗಿ ಇಲ್ಲಿ ಸಂಕಲನಗೊಂಡಿವೆ. ಇತ್ತೀಚಿನ ಕವನಗಳಾದರೂ ನವೋದಯದ ಪ್ರಾಸಬದ್ಧ ಶೈಲಿಯನ್ನೇ ಉಳಿಸಿಕೊಂಡು ಅರ್ಥವಂತಿಕೆಯನ್ನೂ ಮೆರೆದಿವೆ. ಸಮಸ್ಯೆಯ- ಆತಂಕದ ಸುಳಿಯ ಮಧ್ಯೆ ಇರುವ ಜನತೆಯನ್ನೇ ಕಾವ್ಯದ ವಸ್ತುವನ್ನಾಗಿಸಿದ್ದಾರೆ.

Related Books