ಚಂದಿರನ ಕಣ್ಣು ಇಂಗಲಾರದ ಹುಣ್ಣು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 104

₹ 80.00




Year of Publication: 2004
Published by: ಮಾನವ ಧರ್ಮಪೀಠ
Address: ಬಸವನಗುಡಿ, ಬೆಂಗಳೂರು

Synopsys

‘ಚಂದಿರನ ಕಣ್ಣು ಇಂಗಲಾರದ ಹುಣ್ಣು’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ, ಸು.ರಂ. ಎಕ್ಕುಂಡಿ, ಜಿ.ಎಸ್. ಶಿವರುದ್ರಪ್ಪ, ಕಿ.ರಂ. ನಾಗರಾಜ ಹಾಗೂ ಪ್ರಭುಶಂಕರ ಅವರ ಬೆನ್ನುಡಿಯ ಬರಹಗಳಿವೆ. ಕೃತಿಯ ಕುರಿತು ಮಾತನಾಡುತ್ತಾ ‘ಈ ಸಂಕಲನದ ಕವಿತೆಗಳನ್ನು ಓದಿಕೊಂಡಾಗ, ಆಧುನಿಕ ಕನ್ನಡ ಕಾವ್ಯದ ಅನೇಕ ಅವಸ್ಥಾಂತರಗಳನ್ನು ಕಂಡ ನನಗೆ ಈ ಕಾವ್ಯ ಹೊಸ ಬಗೆಯದೆನಿಸಿತು’ ಎಂದಿದ್ದಾರೆ ಕೀರ್ತಿನಾಥ ಕುರ್ತಕೋಟಿ. ಹಾಗೇ ಈ ಕವಿತೆಗಳು ದಲಿತಲೋಕದ ಅನುಭವಗಳನ್ನು ಇರುವರೆಗೂ ಅಭಿವ್ಯಕ್ತಿಪಡಿಸುತ್ತಿದ್ದ ಕ್ರಮದಿಂದ ಬೇರೆಯದೇ ಆದ ಒಂದು ಹದವನ್ನು ಪಡೆದುಕೊಂಡಿದೆ' ಎನ್ನುತ್ತಾರೆ ಜಿ.ಎಸ್. ಶಿವರುದ್ರಪ್ಪ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books