‘ಅರಿತ ಜ್ಞಾನ’ ಕೃತಿಯು ಉತ್ತಮ ಎ. ದೊಡ್ಮನಿ ಅವರ ಹಾಯಿಕುಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಸಿದ್ದರಾಮ ಹೊನ್ಕಲ್ ಅವರು, `ಜಪಾನಿ ಕಾವ್ಯ ಪ್ರಕಾರವಾದ ಈ ಹಾಯಿಕು ಬರವಣಿಗೆ ಸರಳವಾದುದಲ್ಲ. ಸಮುದ್ರವನ್ನು ಬೊಗಸೆಯಲ್ಲಿ ಹಿಡಿಯುವಂತಹ ಸಾಹಸದ್ದು ಇದು. ಅಕ್ಷರಗಳ ಸಾಂಪ್ರದಾಯಿಕ ಸಿಲೆಬಲ್ ಮೂಲಕವೇ ಸುಮಾರು 300 ಹೈಕುಗಳನ್ನು ಈ ಕೃತಿಯಲ್ಲಿ ಕಟ್ಟಿ ಕೊಟ್ಟಿರುವುದು ಅಭಿನಂದನೀಯವಾಗಿದೆ. ಬಾಬಾ ಸಾಹೇವ್/ ರತ್ನದೊಳಗಿರುವ / ಭಾರತ ರತ್ನ ಈ ದೇಶದಾಗ /ದನಕ್ಕಿದ್ದ ಕಿಮ್ಮತ್ತು / ಮನುಷ್ಯಾಗಿಲ್ಲ ನೆಲದ ಮ್ಯಾಲ / ಯಾವುದು ನಿನ್ನದಲ್ಲ / ತಿಳಿ ಮನುಜ ಎಂದು ಹೇಳುವ ಮೂಲಕವೇ ಸತ್ಯವನ್ನು ಅನಾವರಣ ಗೊಳಿಸುತ್ತಾರೆ. ಚಿಂತನೆಗೆ ಹಚ್ಚುತ್ತಾರೆ. ಬೆಚ್ಚಿಬಿಳಿಸುತ್ತಾರೆ. ಹರಿಯುತ್ತಿದೆ/ ನಮ್ಮೂರ ಹಳ್ಳ ತನ್ನ / ಎಲ್ಲೆಯ ಮೀರಿ ಮನಸ್ಸೆಂಬುದು / ಹರಿಯುವ ನೀರಾದ್ರೆ / ಮನಕುಲ್ಲಾಸ ಹೀಗೆ ಹಾಯಿಕು ಬಯಸುವ ಪ್ರಕೃತಿ, ಪ್ರಕೃತಿಯೇ ಅದ ಹೆಣ್ಣು ಇಂತಹ ಸುಕೋಮಲ ಭಾವದ ಹೈಕುಗಳು ಸಹ ಕೃತಿಯಲ್ಲಿ ಮಿಂಚಿ ಮನಸೆಳೆಯುತ್ತವೆ. ಇದು ಈ ಲೇಖಕರ ಎರಡನೇ ಸಂಕಲನ. ಇವರ ಓದು, ಅನುಭವ ವಿಸ್ತಾರವಾದಂತೆ ಇವರಿಂದ ಇನ್ನಷ್ಟು ಗಟ್ಟಿಯಾದ, ಆಳವಾದ ಬರಹ ಒಡಮೂಡಲಿರುವ ಭರವಸೆ ಈ ಕೃತಿಗಳು ನೀಡುತ್ತವೆ' ಎಂದಿದ್ದಾರೆ.
ಆಳಂದ ತಾಲೂಕಿನ ಸಾವಳಾಗಿ ( ಕೆ) ಗ್ರಾಮದಲ್ಲಿ ಉತ್ತಮ ಎಂ. ದೊಡ್ಮನಿ ಜನಿಸಿದ್ದು, ಚಿಂಚೋಳಿ ತಾಲೂಕಿನ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾಗಿದ್ದಾರೆ. ಎಂ..ಎ. ಅರ್ಥಶಾಸ್ತ್ರ. ಮತ್ತು ರಾಜ್ಯ ಶಾಸ್ತ್ರ ಪದವೀಧರರು. ಕೃತಿಗಳು: ಒಡಲಾಳದ ಧ್ವನಿ (ಕವನ ಸಂಕಲನ), ...
READ MORE