'ನಾನೂ ಶಿಲ್ಪವಾಗಬೇಕು' ಇದು ಉಮೇಶ ಮುಂಡಳ್ಳಿ ಅವರ ಮೂರನೇ ಕವನ ಸಂಕಲನ. ಇಲ್ಲಿನ ಕವನಗಳಲ್ಲಿನ ಲಯ ಭಾವನಿರ್ಭರತೆಗಳೆಲ್ಲವೂ ಸಂಗೀತ ಸಂಯೋಜಕನಿಗೆ ಹೇಳಿ ಮಾಡಿದಂತಿದೆ. ಅವ್ವ ಕವನ ಭಾವವನ್ನೂ ಮೀರಿ ಭೌದ್ಧಿಕ ನೆಲೆಗಟ್ಟಿನ ಗಟ್ಟಿ ಕವನ. - ವಿಷ್ಣು ನಾಯ್ಕ ಅಂಕೋಲಾ
ಕವಿ, ಲೇಖಕ, ಪ್ರಕಾಶಕ, ಅಂಕಣಕಾರ, ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಮೂಲತಃ ಭಟ್ಕಳದವರು. ಇವರು ಹತ್ತು ವರ್ಷಗಳ ಕಾಲ ಭಟ್ಕಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2016-2021 ರವರೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕೋಶಾಧ್ಯಕ್ಷರಾಗಿ ಸಾಹಿತ್ಯ ಕಾರ್ಯ ನಿರ್ವಹಿಸಿರುತ್ತಾರೆ. 2016ರಲ್ಲಿ ನಿನಾದ ಸಾಹಿತ್ಯ,ಸಂಚಯ ಸಂಸ್ಥೆಯನ್ನು ಹುಟ್ಟುಹಾಕಿ ಕಲಾಪೋಷಕರಾಗಿಯೂ, ಕಲಾಸೇವೆ ಮಾಡುತ್ತಿದ್ದಾರೆ. ಕೃತಿಗಳು: ಮೌನಗೀತೆ(2003), ಭಾವಸುಮ(2005), ನಾನೂ ಶಿಲ್ಪವಾಗಬೇಕು(2003), ಕರುನಾಡು ಕುಡಿಗಳು(ಸಂಪಾದಿತ ಕೃತಿ-2003), ಬೆಂಕಿ ಬಿದ್ದಿದೆ ಹೊಳೆಗೆ!ಮತ್ತು ಇತರ ಕಥೆಗಳು(2012), ಉತ್ತರಕನ್ನಡಕ್ಕೆ ಒಂದು ಸುತ್ತು(ಪ್ರವಾಸಿ ಕಥನ-2023), ತಿಂಗಳ ಬೆಳಕು(ಹನಿಗವನ ಸಂಕಲನ) ಪ್ರಶಸ್ತಿಗಳು: ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ, ತಾಲೂಕು ಮಟ್ಟದ ಕನ್ನಡ ...
READ MORE