`ಒಡೆದ ಪ್ರತಿಮೆಗಳು’ ಬಾಲಸುಬ್ರಮಣ್ಯ ಕಂಜರ್ಪಣೆ ಅವರ ಕವನ ಸಂಕಲನವಾಗಿದೆ. ಹಳೆಯ ಹಾಗೂ ಹೊಸ ಶೈಲಿಗಳ ಮಧ್ಯೆ ದಾರಿ ಮಾಡಿಕೊಂಡು ನಡೆಯುವವನ ಮನಸ್ಥಿತಿಯ ಬಗ್ಗೆ ನವಿರಾಗಿ ಸೂಚ್ಯವಾಗಿ ತಿಳಿಸಬಲ್ಲ ಚಾತುರ್ಯ ಈ ಕವಿತೆಗಳಲ್ಲಿದೆ.
ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆ.ಪಿ.ಬಾಲಸುಬ್ರಮಣ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಯಲ್ಲಿ (20-05-1954) ಜನಿಸಿದರು. ಕೃಷಿ ಹಿನ್ನೆಲೆಯ ಅವರು ಉತ್ತಮ ಬರಹಗಾರರು. ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದು, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವವಿದೆ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಸ್ವಯಂಪ್ರಭೆ, ಒಡೆದ ಪ್ರತಿಮೆಗಳು (ಕವನ ಸಂಕಲನಗಳು), ಅದೃಷ್ಟದ ಹುಡುಗಿ (ಕಥಾ ...
READ MOREಹೊಸತು-ಜನವರಿ-2003
ಉತ್ಸಾಹ ಹಾಗೂ ಹುಮ್ಮಸ್ಸಿನ ಯುವ ಕವಿ ಕಂಜರ್ಪಣೆಯವರ ೪೪. ಕವಿತೆಗಳು ನಿಸರ್ಗ ಪ್ರೇಮಿಯೊಬ್ಬನ ಹಚ್ಚ ಹಸಿರಿನರದ ಪ್ರತಿಮೆಗಳುಅನಿಸಿಕೆಗಳನ್ನು ನಮಗೆ ತಿಳಿಸುತ್ತವೆ. ಆಶ್ಚರ್ಯ ಅಚ್ಚರಿಗಳನ್ನು ತನ್ನಲ್ಲಿ ಹುದುಗಿಸಿಡ ಲಾಗದೆ ಅವುಗಳ ಬೆನ್ನತ್ತಿ ಕಾರಣ ಹುಡುಕುವ ಸಂಶೋಧಕನ ಮನಸ್ಸೆಂದು ಈ ಕವಿತೆಗಳ ಉದ್ದಕ್ಕೂ ಕಾಣಿಸಿಕೊಂಡಿದೆ. ಹಳೆಯ ಹಾಗೂ ಹೊಸ ಶೈಲಿಗಳ ಮಧ್ಯೆ ದಾರಿ ಮಾಡಿಕೊಂಡು ನಡೆಯುವವನ ಮನಸ್ಥಿತಿಯ ಬಗ್ಗೆ ನವಿರಾಗಿ ಸೂಚ್ಯವಾಗಿ ತಿಳಿಸಬಲ್ಲ ಚಾತುರ್ಯ ಕವಿತೆಗಳಲ್ಲಿದೆ.