ಹಲವಾರು ನಿರಾಳ ಕ್ಷಣಗಳು ಮಾಗಿ ಕಾಲದ ಸಾಲುಗಳು ಸಂಕಲನದ ಉದ್ದಕ್ಕೂ ಇವೆ. ಇವರ ಕವಿತೆಗೆ ಮೈತುಂಬ ಎಚ್ಚರಿದೆ. ಆ ಎಚ್ಚರವೆಂದರೆ ಧ್ಯಾನದ ಎಚ್ಚರ. ಆದುದರಿಂದ ತನ್ನೊಡಲು ಬಿಟ್ಟು ಬೇರಲ್ಲೂ ಸುಳಿಯುವುದಿಲ್ಲವಿದು. ಧ್ಯಾನಸ್ಥ ಕವಿತೆ ಎಂಬ ಮಾತುಗಳನ್ನು ಕೇಳಿದ್ದೇವೆ: ಯಾರೋ ಎಸೆದ ಕಲ್ಲಿಗೆ ತನ್ನಲ್ಲಿ ಉಂಟಾದ ತರಂಗಗಳನ್ನು ತಾನೇ ಅನುಭವಿಸುವ ಕೊಳದಂತೆ ಈ ಕವಿತೆ. ಹೇಗೆ ಎಸೆದರೂ, ಹೇಗೆ ಬಿದ್ದರೂ ಬಾಣದ ಮೊನೆಯಲ್ಲೇ ಸದಾ ಇರುವ ಅಗೋಚರ ಗುರಿಯಂತೆ ಈ ಕವಿತೆ. ತನ್ನನ್ನು ತಾನು ಅನುಭವಿಸುವುದಕ್ಕೆ ಇನ್ನೊಂದು ಬೇಕೇನೋ, ಆ ಇನ್ನೊಂದು ಕೂಡಾ ತಾನೇ ಆಗಿರುವೆನೇನೋ. ಹೀಗೆ ತೇಜಶ್ರೀ ಅವರ ಕವಿತೆಗಳು ಹೊಸ ಹುರುಪೊಂದನ್ನು ನೀಡುವಂತಿವೆ.
ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...
READ MORE