ದನಿಎತ್ತಿ ಹಾಡೇನ

Author : ಬಸವರಾಜ ಸಬರದ

Pages 60

₹ 10.00




Year of Publication: 1990
Published by: ಸ್ವಯಂಜ್ಯೋತಿ ಪ್ರಕಾಶನ
Address: ಗುಲಬರ್ಗಾ- 585102

Synopsys

‘ದನಿಎತ್ತಿ ಹಾಡೇನ’ ಲೇಖಕ ಬಸವರಾಜ ಸಬರದ ಅವರ ಕವನ ಸಂಕಲನ. ಈ ಸಂಕಲನಕ್ಕೆ ಡಾ.ಸಿದ್ಧಲಿಂಗಯ್ಯ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಬಂಡಾಯ ಕವಿ ಡಾ. ಬಸವರಾಜ ಸಬದರದ ಪುಟಿಯುವ ಜೀವನಪ್ರೀತಿಯನ್ನು ಹೃದಯದಲ್ಲಿ ತುಂಬಿಕೊಂಡಿದ್ದಾರೆ. ಆದ್ದರಿಂದಲೇ ಅವರ ಕವಿತೆ ಕಳೆದು ಹೋಗಿರುವ ಪ್ರೀತಿ ಮತ್ತು ಸಮಾನತೆಗಳನ್ನು ಮರಳಿ ತರುವ ಆಶಯದಿಂದ ಅರಳುತ್ತವೆ ಎಂದಿದ್ದಾರೆ ಸಿದ್ಧಲಿಂಗಯ್ಯ. ಜೊತೆಗೆ ಈ ಕೃತಿಯಲ್ಲಿ ಹಾಡಿನ ಅನೇಕ ಹೊಸ ಹೆಜ್ಜೆ ಗುರುತುಗಳಿವೆ. ಉತ್ತರ ಕರ್ನಾಟಕದ ಜಾನಪದ ಸೊಗಡಿನಿಂದ ಝಳಪಿಸುವ ಈ ಹಾಡುಗಳು ಹೊಸದಾದ ಸೌಂದರ್ಯ ಪ್ರಜ್ಞೆಯನ್ನು ಹುಟ್ಟುಹಾಕಿವೆ. ಕವಿತೆಯ ಪ್ರದರ್ಶಕ ಗುಣವನ್ನು, ಅದರ ಉಪಯುಕ್ತತೆಯನ್ನು ಅರಿತಿರುವ ಈ ಕವಿ ಹಾಡುಗಳ ಸಂಕಲನವನ್ನು ಪ್ರಕಟಿಸುತ್ತಿರುವುದು ತುಂಬಾ ಸ್ವಾಗತಾರ್ಹ, ನೊಂದವರ ದನಿಯಾಗಿರುವ ಸಬರದ ಅವರನ್ನು ಮನದುಂಬಿ ಅಭಿನಂದಿಸುತ್ತೇನೆಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books