ಕೊಂದ ಕನಸುಗಳ ಕೇಸು

Author : ಮುಮ್ತಾಜ್ ಬೇಗಂ, ಗಂಗಾವತಿ

Pages 104

₹ 100.00




Year of Publication: 2021
Published by: ಜೀವನ್ ಪಬ್ಲಿಕೇಷನ್ಸ್
Address: ಜೀವನ್ ನಿಲಯ, ಶ್ರೀಸಾಯಿಬಾಬ ನಗರ್, ಉಳ್ಳಿದಗ್ಗಿ, ಹೆಚ್. ನಂ.45, 1ನೇ ಮುಖ್ಯರಸ್ತೆ, ವಡ್ಡರಹಳ್ಳಿ-583235 , ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ

Synopsys

ಮುಮ್ತಾಜ್ ಬೇಗಂ, ಗಂಗಾವತಿ ಅವರ ಕವನ ಸಂಕಲನ ‘ಕೊಂದ ಕನಸುಗಳ ಕೇಸು ’. ಈ ಕೃತಿಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಬೆನ್ನುಡಿಯ ಮಾತುಗಳನ್ನು ಬಬರೆದಿದ್ದಾರೆ. ಅವರು ಹೇಳುವಂತೆ, ಮಾನವೀಯ ಸಮಾಜ ಮತ್ತು ಮನಷ್ಯ ಸಂಬಂಧಗಳಿಗೆ ಸದಾ ತುಡಿಯುವ ಮುಮ್ತಾಜ್ ಅವರು ಕಳಕಳಿಯಿಂದ ಕಟ್ಟಿರುವ ಕೆಲವು ಕವಿತೆಗಳು ಅವರ ಬಗ್ಗೆ ಭರವಸೆಯನ್ನು ಬೆಳೆಸುತ್ತವೆ. ವಿಶೇಷವಾಗಿ ಎಲ್ಲ ಬಗೆಯ ಕಂಟಕಗಳನ್ನು ಮೀರಿ ಬೆಳೆಯಬೇಕೆಂಬ ಕವಿಯ ಸಂಘ ಶಕ್ತಿ ಅದರಲ್ಲಿ ಎಂಬುದಾಗಿ ಹೇಳಿದ್ದಾರೆ.

About the Author

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.  ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...

READ MORE

Related Books