ಪುರಾವೆ ನೀಡಬೇಕಿಲ್ಲ

Author : ಪದ್ಮಿನಿ ನಾಗರಾಜ್ ಎಸ್.ಪಿ.

Pages 72

₹ 90.00




Year of Publication: 2020
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401

Synopsys

‘ಪುರಾವೆ ನೀಡಬೇಕಿಲ್ಲ’ ಲೇಖಕಿ ಡಾ. ಪದ್ಮಿನಿ ನಾಗರಾಜು ಅವರ ಕವನ ಸಂಕಲನ. ಸಂಕಥನ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಕವಿ ಡಾ. ಸಿದ್ಧಲಿಂಗಯ್ಯ ಮುನ್ನುಡಿ ಬರೆದು ‘ಪದ್ಮಿನಿಯವರು ಭಾವುಕತೆಗಿಂತ ಹೆಚ್ಚಾಗಿ ನಿರ್ಭೀತಿಯಲ್ಲಿ, ಪ್ರತಿಷ್ಠೆಗಿಂತ ಹೆಚ್ಚಾಗಿ ಜೀವನ ಪ್ರೀತಿಯಲ್ಲಿ ನಂಬಿಕೆಯಿಟ್ಟವರು, ಅವರ ಕವಿತೆಗಳು ಪ್ರಧಾನವಾಗಿ ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮತೆಯನ್ನು ಕುರಿತು ಮಾತನಾಡುತ್ತವೆ. ಓದುಗರ ಸಿದ್ಧ ನಂಬಿಕೆಗಳನ್ನು ಅಲುಗಾಡಿಸುತ್ತಾ ಹೋಗುತ್ತವೆ. ಕೆಲವು ಕವಿತೆಗಳಲ್ಲಿ ಸಾವಿನ ಧ್ಯಾನವಿದ್ದರೆ ಮತ್ತೆ ಕೆಲವು ಕವಿತೆಗಳಲ್ಲಿ ಬದುಕುವ ಹಂಬಲ ಚಿಗುರೊಡೆಯುತ್ತದೆ’ ಎಂದು ಪ್ರಶಂಸಿಸಿದ್ದಾರೆ.

ಸಂಕಲನದಲ್ಲಿ ಬದುಕು-19, ಬೋಧಿವೃಕ್ಷ, ಧ್ಯಾನ, ಮುನಿಸು ಕೊಂದಿತು, ಲೇಡಿ ಬಾಯ್ ಗಳು, ಗುಜರಾತಿನ ಕುವರ ಎಚ್ಚರವಿದ್ದಾನೆ, ಮಳೆ, ಅಮೃತ ಪ್ರೀತಿ, ಹಿಡಿದಿಡಲುಂಟೆ ಅನವರತ, ಕಪಾಟಿನಲಿ ಸೀರೆಯಿದೆ, ಮನುಜರಿಗಾಗಿ, ಮರುಭೂಮಿಯ ಒರತೆ, ನಾನು ಮತ್ತು ಹಲ್ಲಿ, ಒಂಟಿ ಕಡಲಿನೊಂದಿಗೆ, ತೇನೆ ಸಾಕ್ಷಿಯಲಿ, ಹಸಿವು ಗೆದ್ದ ಬಾಲೆ, ಮಳೆ ಬರುತ್ತಲಿದೆ, ನನ್ನೆದೆಯ ರಾಗಕ್ಕೆ, ತೇರು, ಬರಿಗಾಲ ಸಂತನ ಸಾಂಗತ್ಯ, ಲೆಕ್ಕಚಾರ, ಮಾಯೆ, ಮನದ ತಕ್ಕಡಿಯಲ್ಲಿ, ಮಾಯಾನಗರಿ, ಒಲೆಯಾರದಂತೆ ಕಾವಲಿರಿ, ಒತ್ತಾಯಕ್ಕೆ, ಪುರಾವೆ ನೀಡಬೇಕಿಲ್ಲ, ಮತ್ತು ಸಾವೊಂದು ನೆಪ ಹೀಗೆ 28 ಕವಿತೆಗಳಿವೆ.

About the Author

ಪದ್ಮಿನಿ ನಾಗರಾಜ್ ಎಸ್.ಪಿ.
(06 April 1966)

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ. 'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) ...

READ MORE

Related Books