'ಶಬ್ದ ಕಣ್ಣಿನ ನಡುವೆ ' ನಮ್ಮ ನಾಡಿನ ಕಾವ್ಯ ಪ್ರೇಮಿಗಳಿಗೆ ಚಿರಪರಿಚಿತರಾದ ರಘುನಾಥರ ನಾಲ್ಕನೆಯ ಕವನ ಸಂಕಲನ. ರಘುನಾಥರು ವಿವಿಧ ಸಂದರ್ಭಗಳಲ್ಲಿ ರಚಿಸಿದ ಹಲವು ಕವನಗಳು ಈ ಕೃತಿಯಲ್ಲಿವೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MOREಕನ್ನಡ ಕಾವ್ಯಾಸಕ್ತರಿಗೆ ಪರಿಚಿತರಾದ ಸ. ರಘುನಾಥರ ನಾಲ್ಕನೆಯ ಕವನ ಸಂಕಲನ. ಇಲ್ಲಿನ ಹೆಚ್ಚಿನ ಎಲ್ಲ ಪದ್ಯಗಳನ್ನೂ ತು೦ಬ ಸಾವಧಾನದಿ೦ದಲೇ ಓದಿ ಅರ್ಥೈಸಬೇಕಾಗಿದೆ. ನವ್ಯದ ಶೈಲಿಯೆಂದು ಗುರುತಿಸಬಹುದಾದ ಈ ಪದ್ಯಗಳು ಸ್ವಲ್ಪ ಬಿಗುವನ್ನೂ ಒಗಟನ್ನೂ ಒಡಲಲ್ಲಿ ಹಿಡಿದಿಟ್ಟುಕೊಂಡು ಒಡೆದು ನೋಡಿದರೆ ಅರ್ಥವಾಗಬಲ್ಲವು. ಹೊಸ ಹೊಸ ಪ್ರಯೋಗಗಳಿಂದ ಕಾವ್ಯವನ್ನು ಆಸ್ವಾದಿಸುವವರಿಗೆ ಸಾಕಷ್ಟು ವೈವಿಧ್ಯತೆಯನ್ನು ಇವು ನೀಡುತ್ತವೆ.