ಕವಿ ಕುವೆಂಪು ಅವರ ೭೫ ಸಾನೆಟ್ ಗಳನ್ನು ಒಳಗೊಂಡ ಸಂಕಲನವಿದು. ಈ ಸಂಕಲನವನ್ನು ೧೯೪೬ರಲ್ಲಿ ಮೊದಲ ಬಾರಿಗೆ ಕೂಡಲಿ ಚಿದಂಬರಂ ಅವರು ತಮ್ಮ”ಕಾವ್ಯಾಲಯ’ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದ್ದರು. ನಂತರ ಉದಯ ರವಿ ಪ್ರಕಾಶನದಿಂದ ಈ ಸಂಕಲನವು ಹಲವು ಮುದ್ರಣ ಕಂಡಿದೆ. ಹದಿನಾಲ್ಕು ಸಾಲಿನ ಕವಿತೆಗಳನ್ನು ಸಾನೆಟ್, ಸುನೀತ, ಅಷ್ಟಷಟ್ಪದಿ ಎಂದು ಕರೆಯಲಾಗುತ್ತದೆ. ಇಟಲಿಯಲ್ಲಿ ಪೆಟ್ರಾರ್ಕ್ ನಿಂದ ಆರಂಭವಾದ ಈ ಕಾವ್ಯ ಪ್ರಕಾರವು ಇಂಗ್ಲಿಷ್ ಕವಿ ಶೇಕ್ಸ್ ಪಿಯರ್ ನಿಂದಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು. ಎರಡು ಭಾಗಗಳಲ್ಲಿ ಇರುವ ಪೆಟ್ರಾರ್ಕ್‌ನ ಸಾನೆಟ್ ನ ಮೊದಲ ಭಾಗದಲ್ಲಿ ಆರು ಸಾಲು ಮತ್ತು ನಂತರ ಎಂಟು ಸಾಲುಗಳಿರುತ್ತಿದ್ದವು. ಶೇಕ್ಸ್ ಪಿಯರ್ ನು ಮೂರು ಚೌಪದಿ ಮತ್ತು ಕೊನೆಯಲ್ಲಿ ಒಂದು ದ್ವಿಪದಿಗಳಿರುವಂತೆ ಬದಲಿಸಿದ. ಕುವೆಂಪು ಅವರು ತಮ್ಮ ಸಾನೆಟ್ ಗಳಲ್ಲಿ ಈ ಎರಡೂ ಮಾದರಿಗಳನ್ನು ಅನುಸರಿಸದೇ ತಮ್ಮದೇ ಹೊಸ ಮಾದರಿಯನ್ನು ಕಂಡುಕೊಂಡಿದ್ದಾರೆ. ಅವು ಒಟ್ಟಾರೆಯಾಗಿ ೧೪ ಸಾಲಿನ ಪದ್ಯಗಳು. ಮೊದಲ ಆವೃತ್ತಿಯಲ್ಲಿ ಕೂಡಲಿ ಚಿದಂಬರಂ ಅವರು ’ಅರಿಕೆ’ಯಲ್ಲಿ ಈ ಸಂಕಲನದ ಕೆಲವು ಸಾನೆಟ್ ಗಳು ಪ್ರಬುದ್ಧ ಕರ್ನಾಟಕ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕೆಲವು ಈ ಸಂಕಲನದಲ್ಲಿಯೇ ಮೊದಲ ಬಾರಿಗೆ ಪ್ರಕಟವಾಗಿವೆ. ’ಕೃತ್ತಿಕೆ’ಗೂ ಮುನ್ನ ಪ್ರಕಟವಾಗಿದ್ದ ’ಪಾಂಚಜನ್ಯ’ ಮತ್ತು ’ನವಿಲು’ ಸಂಕಲನಗಳಲ್ಲಿ ೧೬ ಸಾನೆಟ್ ಗಳು ಪ್ರಕಟವಾಗಿದ್ದವು. ಅವುಗಳು ಈ ಸಂಕಲನದಲ್ಲಿ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ. ಕವಿ ಶೈಲ ವನ್ನು ಕುರಿತ ೫ ಮತ್ತು ಕನ್ನಂಬಾಡಿ ಕುರಿತ ೬ ಸಾನೆಟ್ ಗಳಿರುವುದು ವಿಶೇಷ. ಚಂದ್ರಗ್ರಹಣ ಮತ್ತು ಸಾಕ್ರೆಟಿಸ್, ಹೋಮರ್, ವರ್ಡ್ಸ್‌ವರ್ತ್, ಪಂಜೆ ಮಂಗೇಶರಾಯರು, ಟಾಲ್ ಸ್ಟಾಯ್ ಕುರಿತ ಸಾನೆಟ್ ಗಳಿವೆ. ಪ್ರಕೃತಿ ವರ್ಣನೆ, ರಾಷ್ಟ್ರಭಕ್ತಿ ಕುರಿತ ಸಾನೆಟ್ ಗಳು ಗಮನ ಸೆಳೆಯುತ್ತವೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE