ಪರಸ್ಪರ ದ್ವೇಷ, ಅಸೂಯೆ , ಅಸಹನೆ ಮತ್ತು ರಾಜಕೀಯ ಜಂಜಾಟದೊಳಗೆ ಮುಳುಗಿರುವ ಎಲ್ಲರ ಮನಃಸ್ಥಿತಿಗಳಿಗೆ ರೇವಣಪ್ಪ ಬಿದರಗೇರಿ ಅವರ ’ಜೋಗದ ಸಿರಿ’ ಕವನ ಸಂಕಲನವು ಉತ್ತಮ ಸಂದೇಶವನ್ನು ನೀಡುವಂತದ್ದು.
ಜಾಗತೀಕರಣದ ಭರಾಟೆಯಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ದಿನಮಾನಗಳಲ್ಲಿ ಇಂತಹ ಸಾಮಾಜಿಕ ಕಳಕಳಿಯುಳ್ಳ ಕವಿತೆಗಳ ಅವಶ್ಯಕತೆ ಕಂಡು ಬರುತ್ತದೆ. ಓದುಗರಿಗೆ ಸುಲಭವಾಗಿ ಅರ್ಥವಾಗುವ, ಸರಳ ಶೈಲಿಯಲ್ಲಿನ , ಆಡುಭಾಷೆಯಲ್ಲಿ ಕವನಗಳನ್ನು ರಚಿಸಲಾಗಿದೆ.
ರೇವಣಪ್ಪ ಬಿದರಗೇರಿ ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಮೂಲತಃ ಸೊರಬ ಜಿಲ್ಲೆಯ ಬಿದರಗೇರಿಯವರಾದ ಇವರು ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿಯಾಗಿ ಚಿರಪರಿಚಿತರು. ಹೃದಯ ಕದ್ದ ಕಣ್ಣು (ಕಾದಂಬರಿ), ಜೀವನ ಜೋಪಾನ , ಸಾಹಿತ್ಯ ದೇಗುಲ, (ಕಥಾ ಸಂಕಲನ), ಜೋಗದ ಸಿರಿ , ಕಾವ್ಯ ಕಲರವ, ಕಪ್ಪು ಹಣ ಹೇಗಾಯಿತು ? ಏಕೆ ? , ಕೆ. ಎಸ್. ನ ನೆನಪು, (ಕವನ ಸಂಕಲನ) ಒಂದಾಗಿ ಬಾಳೋಣ , ಬೇಲಿಯ ಹೂಗಳು, (ಮಕ್ಕಳ ಕವನ ಸಂಕಲನ) ಉರಿಯುವ ಕೆಂಡದ ಮೇಲೆ ...
READ MORE